ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ಶಿವನ ಸಮುದ್ರ ಗ್ರಾಮದಲ್ಲಿರುವ ಶ್ರೀ ಮಧ್ಯರಂಗನಾಥಸ್ವಾಮಿಗೆ ಮಂಗಳವಾರ ವಿವಿಧ ಹೂವಿನಿಂದ ಅಲಂಕರಿಸಲಾಗಿತ್ತು.
ಕೊಳ್ಳೇಗಾಲ: ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಮಧ್ಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರಾತಃಕಾಲದಲ್ಲಿ ಮಧ್ಯರಂಗನಾಥಸ್ವಾಮಿಗೆ ಸುಪ್ರಭಾತ ಸೇವೆ, ಸಹಸ್ರ ನಾಮ, ತೋಮಾಲೆ ಸೇವೆ(ಹೂವಿನ ಅಲಂಕಾರ ಸೇವೆ), ನೈವೇದ್ಯ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು.
ಬಳಿಕ ನೆರೆದಿದ್ದ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ತೆರೆಯಲಾಗಿದ್ದ ವೈಕುಂಠದ್ವಾರ(ಸ್ವರ್ಗದ ಬಾಗಿಲು) ಮೂಲಕ ಸಾಗಿದರು. ಮುಜರಾಯಿ ಇಲಾಖೆಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಸ್ಥಾನಕ್ಕೆ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು ಹಾಗೂ ಇತರ ಗಣ್ಯರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಎಲ್ಲ ಪೂಜಾ ಕೈಕರ್ಯವನ್ನು ಪ್ರಧಾನ ಅರ್ಚಕ ಕೆ.ಮಾದವನ್ ಭಟ್ಟರು, ಶ್ರೀಧರ್ ಭಟ್ಟರು ನಡೆಸಿಕೊಟ್ಟರು.
ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ಶಿವನ ಸಮುದ್ರ ಗ್ರಾಮದಲ್ಲಿರುವ ಶ್ರೀ ಮಧ್ಯರಂಗನಾಥಸ್ವಾಮಿಗೆ ಮಂಗಳವಾರ ವಿವಿಧ ಹೂವಿನಿಂದ ಅಲಂಕರಿಸಲಾಗಿತ್ತು.
ವಿಜಯವಾಣಿ ಸುದ್ದಿಜಾಲ ಕೊಳ್ಳೇಗಾಲ
ವೈಕುಂಠ ಏಕಾದಶಿ ಪ್ರಯುಕ್ತ ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿರುವ ಶ್ರೀ ಮಧ್ಯ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ವಿವಿಧ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರಾತಃಕಾಲದಲ್ಲಿ ಮಧ್ಯರಂಗನಾಥಸ್ವಾಮಿಗೆ ಸುಪ್ರಭಾತ ಸೇವೆ, ಸಹಸ್ರ ನಾಮ, ತೋಮಾಲೆ ಸೇವೆ(ಹೂವಿನ ಅಲಂಕಾರ ಸೇವೆ), ನೈವೇದ್ಯ ನಡೆಸಿ ಮಹಾಮಂಗಳಾರತಿ ನಡೆಸಲಾಯಿತು.
ಬಳಿಕ ನೆರೆದಿದ್ದ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ತೆರೆಯಲಾಗಿದ್ದ ವೈಕುಂಠದ್ವಾರ(ಸ್ವರ್ಗದ ಬಾಗಿಲು) ಮೂಲಕ ಸಾಗಿದರು. ಮುಜರಾಯಿ ಇಲಾಖೆಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ದೇವಸ್ಥಾನಕ್ಕೆ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರ್ ಬಸವರಾಜು ಹಾಗೂ ಇತರ ಗಣ್ಯರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಎಲ್ಲ ಪೂಜಾ ಕೈಕರ್ಯವನ್ನು ಪ್ರಧಾನ ಅರ್ಚಕ ಕೆ.ಮಾದವನ್ ಭಟ್ಟರು, ಶ್ರೀಧರ್ ಭಟ್ಟರು ನಡೆಸಿಕೊಟ್ಟರು.
ಲಕ್ಷ್ಮೀ ನಾರಾಯಣ ಸ್ವಾಮಿಗೆ ವಿಶೇಷ ಪೂಜೆ:
ವೈಕುಂಠ ಏಕಾದಶಿ ಪ್ರಯುಕ್ತ ಕೊಳ್ಳೇಗಾಲ ಪಟ್ಟಣದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ದೇವರನ್ನು ಅಲಂಕರಿಸಿ ವಿಶೇಷ ಪೂಜೆ ನಡೆಸಲಾಯಿತು. ಮುಂಜಾನೆಯಿಂದ ಅಭಿಷೇಕ, ಶ್ರೀನಿವಾಸ ಅಲಂಕಾರ ನಡೆಸಿ ಮಹಾ ಮಂಗಳಾರತಿ ಮಾಡಿ ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು.
ವೈಕುಂಠ ಏಕಾದಶಿ ಪ್ರಯುಕ್ತ ದೇವಾಲಯವನ್ನು ಹೂವಿನಿಂದ ಅಲಂಕಾರಿಸಲಾಗಿತ್ತು. ಎಲ್ಲ ಪೂಜಾ ಕಾರ್ಯವನ್ನು ಪ್ರಧಾನ ಅರ್ಚಕರು ಶೇಷಾದ್ರಿ ಭಟ್, ಸುದರ್ಶನ್ ಭಟ್, ಅನಂತ ಶೇಷ ಅಯ್ಯಂಗಾರ್ ನೆರವೇರಿಸಿದರು.