ಗುಂಡ್ಲುಪೇಟೆ ಪಟ್ಟಣದ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ವಿಶ್ವ ಮಾನವಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಆರ್.ಬಿ.ಗಿರೀಶ್ ಉದ್ಘಾಟಿಸಿದರು. ರೇವಣ್ಣ, ಡಾ.ಮಹದೇವಮ್ಮ, ಮಲ್ಲಪ್ಪ, ದೇವರಾಜು ಇದ್ದರು. 
ಚಾಮರಾಜನಗರ

ಕಾನೂನು ಅರಿವು ಕಾರ್ಯಕ್ರಮ

ಲೋಕೇಶ್ ಮನು. ಡಿ
ಗುಂಡ್ಲುಪೇಟೆ: ಮಗು ಹುಟ್ಟಿದ ಕ್ಷಣದಿಂದ ತನ್ನ ಹಕ್ಕುಗಳನ್ನು ಪಡೆದಿದ್ದು ಇದನ್ನು ಪ್ರತಿಯೊಬ್ಬರೂ ಗೌರವಿಸಬೇಕಾಗಿದೆ ಎಂದು ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಆರ್.ಬಿ.ಗಿರೀಶ್ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಬುಧವಾರ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹುಟ್ಟಿದ ಮಗುವಿಗೆ ಶಿಕ್ಷಣ ಸೇರಿದಂತೆ ಹಲವು ಮೂಲಭೂತ ಹಕ್ಕುಗಳಿದ್ದು, ಪಾಲಕರು ಇವುಗಳನ್ನು ಪಾಲಿಸಬೇಕಾಗಿದೆ. ಸಂವಿಧಾನವು ಪ್ರತೊಯೊಬ್ಬರಿಗೂ ಶಿಕ್ಷಣ ಸಮಾನತೆ, ಧಾರ್ಮಿಕ ಮುಂತಾದ ಹಕ್ಕುಗಳನ್ನು ನೀಡಿದೆ. ಯಾವುದೇ ವ್ಯಕ್ತಿಗೆ 18 ವರ್ಷ ತುಂಬಿದ ನಂತರ ಮತದಾನದ ಹಕ್ಕು ದೊರಕಿಸುವ ಮೂಲಕ ಎಲ್ಲರನ್ನೂ ಸರಿಸಮಾನವಾಗಿ ಕಾಣಲಾಗುತ್ತಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವಹಕ್ಕುಗಳ ರಕ್ಷಣೆಗೆ ಆಯೋಗ ರಚಿಸಲಾಗಿದೆ ಎಂದು ಹೇಳಿದರು.
ಸಹಾಯಕ ಸರ್ಕಾರಿ ಅಭಿಯೋಜಕ ರೇವಣ್ಣ ಮಾತನಾಡಿ, ಹಿಂದೆ ವರ್ಣ, ದ್ವೇಶ ನೀತಿಯಿಂದ ವೆ ಹೋರಾಟ ನಡೆದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಮಾನವಹಕ್ಕುಗಳ ರಕ್ಷಣೆಗೆ ಆಯೋಗ ರಚಿಸಿದೆ. ಇತ್ತೀಚಿನ ದಿನಗಳಲ್ಲಿ ಮಾನವರ ಹಕ್ಕುಗಳ ರಕ್ಷಣೆಗೆ ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಿದೆ. 1948ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಂಡ ಒಪ್ಪಂದದಂತೆ ಡಿ.10ರಂದು ವಿಶ್ವಾದ್ಯಂತ ಮಾನವಹಕ್ಕುಗಳ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಮಹದೇವಮ್ಮ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲಪ್ಪ, ವಕೀಲ ದೇವರಾಜು ಇತರರು ಇದ್ದರು.