ಯಳಂದೂರು ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಅಂಬೇಡ್ಕರ್ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆಸ್ತೂರು ಸಿದ್ದರಾಜು ಅವರನ್ನು ಅಭಿನಂದಿಸಲಾಯಿತು.
ಯಳಂದೂರು: ತಾಲೂಕು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷರಾಗಿ ಕೆಸ್ತೂರು ಸಿದ್ದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಪಿ. ನಟರಾಜು, ಉಪಾಧ್ಯಕ್ಷರಾಗಿ ಹೊನ್ನೂರು ಗುರುಪ್ರಸಾದ್, ಮಾಂಬಳ್ಳಿ ಬಸವರಾಜು, ಗೌತಮ್ ಬಡಾವಣೆಯ ನಟರಾಜು, ಖಜಾಂಚಿಯಾಗಿ ಗುಂಬಳ್ಳಿ ಮಹದೇವ, ಸಹ ಕಾರ್ಯದರ್ಶಿಯಾಗಿ ಕೊಮಾರನಪುರ ಪುಟ್ಟರಾಜು, ಪತ್ರಿಕಾ ಕಾರ್ಯದರ್ಶಿಯಾಗಿ ವೈ.ಕೆ.ಮೋಳೆ ನಂಜುಂಡಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಬಳೇಪೇಟೆ ಸಂತೋಷ್, ಮದ್ದೂರು ಸಂದೀಪ್ ಅವರನ್ನು ಆಯ್ಕೆ ಮಾಡಲಾಯಿತು.
ಮುಖಂಡರಾದ ಕಿನಕಹಳ್ಳಿ ರಾಚಯ್ಯ, ಹೊನ್ನೂರು ನಿರಂಜನ್, ಮಾಜಿ ಅಧ್ಯಕ್ಷ ರೇವಣ್ಣ, ಜೆ. ಶ್ರೀನಿವಾಸ್, ನಿವೃತ್ತ ಅಧಿಕಾರಿಗಳಾದ ಚಂಗಚಹಳ್ಳಿ ಮಹದೇವಯ್ಯ, ಪ್ರಮೋದ್, ಬಸವರಾಜು, ಕೆ. ಕೃಷ್ಣಯ್ಯ, ರೂಪೇಶ್, ಚಕ್ರವರ್ತಿ, ಮದ್ದೂರು ಪುಟ್ಟಮಲ್ಲು, ಸಿ. ರಾಜಣ್ಣ, ಕಂದಹಳ್ಳಿ ನಾರಾಯಣ, ಪರಶಿವಮೂರ್ತಿ ಸೇರಿದಂತೆ ತಾಲೂಕಿನ 33 ಗ್ರಾಮಗಳಿಂದ ಬಂದಿದ್ದ ಮುಖಂಡರು ಇದ್ದರು.