ಕೊಳ್ಳೇಗಾಲ: ತಾಲೂಕಿನ ಗ್ರಾಮವೊಂದರ ಪ್ರಥಮ ಪಿಯುಸಿ ಓದುತ್ತಿದ್ದ 16 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸಂತ್ರಸ್ತೆಯ ಮಾವನನ್ನು ಅಗರ-ಮಾಂಬಳ್ಳಿ ಠಾಣೆ ಪೊಲೀಸರು ಸೋಮವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣ ಆರೋಪಿ ಶಿವಣ್ಣ (45) ಬಂಧಿತ. ಅಪ್ರಾಪ್ತೆಗೆ ನ.6 ರಂದು ಈಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು. ಬಳಿಕ ಆಕೆಗೆ ಮೈಸೂರಿನ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ವೇಳೆ ವೈದ್ಯರು ಈಕೆ ಅಪ್ರಾಪ್ತೆ ಎಂದು ತಿಳಿದು ಆಕೆಯ ಗ್ರಾಮ ವ್ಯಾಪ್ತಿಗೆ ಬರುವ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಬಳಿಕ, ಪೊಲೀಸರ ವಿಚಾರಣೆ ವೇಳೆ ಅಪ್ರಾಪ್ತೆ ಇದಕ್ಕೆ ಕಾರಣರಾದವರನ್ನು ತಿಳಿಸಿದ್ದು ಇದು ಗೊಂದಲ ಉಂಟು ಮಾಡಿತ್ತು. ಬಳಿಕ ಅಗರ-ಮಾಂಬಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು ಅಪ್ರಾಪ್ತೆಯ ತಂದೆ ತಂಗಿಯ ಗಂಡ ಶಿವಣ್ಣ (ಮಾವ) ಎಂಬುವನನ್ನು ಪ್ರಕರಣದ ಆರೋಪಿಯಾಗಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.