ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಮಿತಿಯ ಚಟುವಟಿಕೆಯನ್ನು ಉದ್ಘಾಟನೆ ಮಾಡಲಾಯಿತು. ರಘುನಾಥ್, ಡಾ.ಮದನಕುಮಾರ್, ವಿಜಯಕುಮಾರ್, ಪುಟ್ಟಬುದ್ಧಿ, ಪುಟ್ಟರಾಜು, ಕೃಷ್ಣಮೂರ್ತಿ, ಡಾ. ತುಳಸಿರಾಮ್, ದಿವ್ಯಾಭಾರತಿ, ಸಂಯುಕ್ತ ಸಿಂಗ್, ಶ್ರೀನಿವಾಸ ನಾಯಕ ಇದ್ದರು. 
ಚಾಮರಾಜನಗರ

ಶಿಕ್ಷಣದ ಜತೆ ಸಂಸ್ಕಾರದ ಅರಿವು ಮೂಡಿಸಿ

ಎಂ.ರವಿ
ಗುಂಡ್ಲುಪೇಟೆ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವುದು ತುಂಬ ಮುಖ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ತಬಲ ವಾದಕ ವಿದ್ವಾನ್ ರಘುನಾಥ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಸಾಂಸ್ಕೃತಿಕ, ಕ್ರೀಡೆ, ರಾ.ಸೇ.ಯೋ, ರೋವರ್ಸ್ ಮತ್ತು ರೇಂಜರ್ಸ್ ರೆಡ್ ಕ್ರಾಸ್ ಹಾಗೂ ವಿವಿಧ ಸಮಿತಿಯ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಸತತ ಪರಿಶ್ರಮ ಹಾಗೂ ಆಸಕ್ತಿಯಿಂದ ಕಲಿತ ಕಲೆಗೆ ಬಡತನ ಹೋಗಲಾಡಿಸುವ ಸಾಮರ್ಥ್ಯ ಇದೆ. ಪರಿಶ್ರಮದಿಂದ ಜೀವನ ಸಾರ್ಥಕ ಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಸಲಹೆ ನೀಡಿದರು. ಬಳಿಕ ತಮ್ಮ ಅದ್ಭುತ ತಬಲ ವಾದನದ ಮೂಲಕ ಎಲ್ಲರನ್ನೂ ರಂಜಿಸಿದರು.
ರಘುನಾಥ್‌ರ ಶಿಷ್ಯರಾದ ಸ್ಪಂದನಾ, ನಾಗರಾಜ್ ಮತ್ತು ಮಿಮಿಕ್ರಿ ಕಲಾವಿದ ಮನೋಜ್ ವಿವಿಧ ಗಣ್ಯ ರಾಜಕಾರಣಿಗಳ ಹಾಗೂ ಸಿನಿಮಾ ನಟರ ಧ್ವನಿ ಅನುಕರಣೆಯ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಪ್ರಸಿದ್ಧ ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮದನಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಹಾಗೆ ಸಂಸ್ಕೃತಿಯೂ ಅಷ್ಟೇ ಮುಖ್ಯ, ಕಲೆ ನಮ್ಮ ದೇಶದ ಸಂಪತ್ತು, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ತಮ್ಮ ಪ್ರತಿಭೆಯನ್ನು ಹೊರ ಹಾಕಲು ಸಾಧ್ಯ ಎಂದರು.
ವಿಜಯಕುಮಾರ್, ಕಚೇರಿ ಅಧೀಕ್ಷಕ ಪುಟ್ಟಬುದ್ಧಿ, ಪುಟ್ಟರಾಜು, ಕೃಷ್ಣಮೂರ್ತಿ, ಡಾ. ತುಳಸಿರಾಮ್, ದಿವ್ಯಾಭಾರತಿ, ಸಂಯುಕ್ತ ಸಿಂಗ್, ಗ್ರಂಥಪಾಲಕ ಶ್ರೀನಿವಾಸ ನಾಯಕ ಹಾಗೂ ಇತರರು ಇದ್ದರು.