ಗುಂಡ್ಲುಪೇಟೆ ತಾಲೂಕಿನ ಯಡಹುಂಡಿ ಗ್ರಾಮದ ದೇವಾಲಯದಲ್ಲಿ ಕಳ್ಳತನವಾಗಿದ್ದ ಗೋಲಕ ಪೊದೆಯಲ್ಲಿ ಪತ್ತೆಯಾಗಿದೆ. 
ಚಾಮರಾಜನಗರ

ಎರಡು ದೇವಾಲಯಗಳಲ್ಲಿ ಹುಂಡಿಗಳ ಕಳವು

ಎಂ.ರವಿ
ಗುಂಡ್ಲುಪೇಟೆ: ತಾಲೂಕಿನ ಚನ್ನಂಜಯ್ಯನಹುಂಡಿ ಗ್ರಾಮದ ಗಣಪತಿ ದೇವಾಲಯ ಹಾಗೂ ಯಡಹುಂಡಿ ಗ್ರಾಮದ ಶನೈಶ್ಚರ ದೇವಾಲಯಗಳ ಗೋಲಕಗಳನ್ನು ಕಳವು ಮಾಡಲಾಗಿದೆ.
ಚನ್ನಂಜಯ್ಯನಹುಂಡಿ ಗ್ರಾಮದ ಗಣೇಶ ದೇವಾಯಲದ ಬಾಗಿಲು ಮೀಟಿದ ಕಳ್ಳರು ಗೋಲಕವನ್ನು ಕದ್ದೊಯ್ದಿದ್ದಾರೆ. ಅದರಲ್ಲಿ ಕಳೆದ ಆರೇಳು ತಿಂಗಳಿಂದ ಸಂಗ್ರಹವಾಗಿದ್ದ ಹಣ ಕಳ್ಳತನವಾಗಿದೆ. ಸಮೀಪದ ಯಡಹುಂಡಿ ಗ್ರಾಮದ ಶನೈಶ್ಚರ ದೇವಾಲಯದ ಗೋಲಕದಲ್ಲಿ ಕಳೆದ 9 ತಿಂಗಳಲ್ಲಿ ಸಂಗ್ರಹವಾಗಿದ್ದ ಹಣ ಕಳ್ಳರ ಪಾಲಾಗಿದೆ. ಗೋಲಕಗಳನ್ನು ತೆರೆದು ಅದರೊಳಗೆ ಸಂಗ್ರಹವಾಗಿದ್ದ ಹಣವನ್ನು ಕದ್ದಿರುವ ಕಳ್ಳರು ಅವುಗಳನ್ನು ದೇವಾಲಯದ ಸಮೀಪದ ಹಳ್ಳದಲ್ಲಿ ಬೀಸಾಡಿ ಹೋಗಿದ್ದಾರೆ.
ಗ್ರಾಮಸ್ಥರಿಂದ ವಿಷಯ ತಿಳಿದ ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಪಟ್ಟಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.