ಚಾಮರಾಜನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಮತ್ತು ಮೌಲಾನಾ ಆಜಾದ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಿ.ಮರಿಸ್ವಾಮಿ, ಬಿ.ಕೆ.ರವಿಕುಮಾರ್, ಮಹಮದ್ ಅಸ್ಗರ್(ಮುನ್ನಾ), ಎ.ಎಸ್.ಗುರುಸ್ವಾಮಿ, ಚಿಕ್ಕಮಹದೇವ, ನಾಗರತ್ನಾ ಇತರರಿದ್ದರು.  
ಚಾಮರಾಜನಗರ

ಟಿಪ್ಪುಸುಲ್ತಾನ್, ಮೌಲಾನ ಆಜಾದ್ ಕೊಡುಗೆ ಸ್ಮರಣೀಯ

ಎಂ.ರವಿ
ಚಾಮರಾಜನಗರ: ಟಿಪ್ಪುಸುಲ್ತಾನ್ ಮತ್ತು ಭಾರತದ ಮೊದಲ ಶಿಕ್ಷಣ ಸಚಿವರಾಗಿದ್ದ ಮೌಲಾನ ಆಜಾದ್ ತಮ್ಮ ಅವಧಿಯಲ್ಲಿ ನಾಡಿಗೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಮೌಲಾನ ಆಜಾದ್, ಟಿಪ್ಪು ಸುಲ್ತಾನ್ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ದೇಶಪ್ರೇಮಿಯಾಗಿದ್ದ ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದನು. ಶ್ರೀರಂಗಪಟ್ಟಣ ಸಂಸ್ಥಾನ ಬ್ರಿಟಿಷರ ಪಾಲಾಗುವುದನ್ನು ತಡೆಯಲು ಯುದ್ಧ ಸಾರಿದ್ದ. ಕೊನೆಗೆ ತನ್ನ ಇಬ್ಬರು ಮಕ್ಕಳನ್ನು ಅವರಿಗೆ ಒತ್ತೆ ಇಟ್ಟಿದ್ದ ಎಂಬುದು ಗಮನಾರ್ಹ ಸಂಗತಿ. ಆಜಾದ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕಾನೂನನ್ನು ಜಾರಿಗೆ ತಂದು ಎಲ್ಲರೂ ವಿದ್ಯಾವಂತರಾಗಲು ಕಾರಣರಾದರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು. ಇಂತಹ ಮಹಾನ್ ವ್ಯಕ್ತಿಗಳ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನಾ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಎಸ್.ಗುರುಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಾಗರತ್ನ, ನಗರಸಭೆ ಮಾಜಿ ಸದಸ್ಯೆ ಚಿನ್ನಮ್ಮ, ಸ್ವಾಮಿ, ತಾಪಂ ಮಾಜಿ ಸದಸ್ಯ ಆರ್.ಮಹದೇವ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಕುಮಾರ್, ಮುಖಂಡರಾದ ನಸ್ರುಲ್ಲಾಖಾನ್, ಚುಡಾ ಮಾಜಿ ಅಧ್ಯಕ್ಷ ಸುಹೇಲ್‌ಅಲಿಖಾನ್, ಆಯೂಬ್‌ಖಾನ್, ಸುಹೇಲ್‌ಅಲಿಖಾನ್, ಅಲ್ಪಸಂಖ್ಯಾತ ಬ್ಲಾಕ್ ಅಧ್ಯಕ್ಷ ಇಮ್ರಾನ್, ಇರ್ಪಾನ್ ಬೈಗ್, ಅಪ್ಸರ್ ಅಹಮದ್, ಸೈಯ್ಯದ್ ಇರ್ಷಾದ್, ಅಲ್ಪ ಸಂಖ್ಯಾತ ಜಿಲ್ಲಾಧ್ಯಕ್ಷ ಅಪ್ಜಲ್ ಷರೀಪ್, ಎಸ್ಸಿ-ಎಸ್ಟಿ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯ ಸಿ.ಸಿದ್ದರಾಜು, ಸೇವಾ ದಳ ಜಿಲ್ಲಾ ಉಪಾಧ್ಯಕ್ಷ ನಾಗರಾಜು, ಜಿ.ಡಿ.ಪ್ರಕಾಶ್, ಸೋಮಣ್ಣೇಗೌಡ, ಜಿ.ಪಂ ಮಾಜಿ ಸದಸ್ಯೆ ಕಾವೇರಿಶಿವಕುಮಾರ್, ಮಹೇಶ್ ಹಾಜರಿದ್ದರು.