ಚಾಮರಾಜನಗರದ ಶ್ರೀಅನುಲಕ್ಷ್ಮೀ ಸೇವಾ ಆಶ್ರಮಕ್ಕೆ ಗೃಹೋಪಯೋಗಿ ವಸ್ತುಗಳನ್ನು ಕೊಡುಗೆ ನೀಡಲಾಯಿತು. ಗುರು, ಡಾ.ನಾಗಾರ್ಜುನ್, ಕಾಗಲವಾಡಿ ಚಂದ್ರು, ಸಿ.ವಿ.ಶ್ರೀನಿವಾಸಶೆಟ್ಟಿ, ಅಶ್ವಥ್ ನಾರಾಯಣ್, ಯೋಗರಾಜು ಇತರರಿದ್ದರು.
ಚಾಮರಾಜನಗರ: ನಗರದ ನಂಜನಗೂಡು ರಸ್ತೆಯ ಸಮೀಪದಲ್ಲಿರುವ ಶ್ರೀಅನುಲಕ್ಷ್ಮೀ ಸೇವಾ ಆಶ್ರಮಕ್ಕೆ ರೋಟರಿ ಸಂಸ್ಥೆಯ ಸಹಕಾರದೊಂದಿಗೆ ಸೈಕಲ್ ಅಗರಬತ್ತಿ ಮಾಲೀಕ ಗುರು, ಪ್ರಕಾಶ್ ಅವರು ಗೃಹೋಪಯೋಗಿ ವಸ್ತುಗಳನ್ನು ಕೊಡುಗೆ ನೀಡಿದರು.
ಇದೇ ವೇಳೆ ಪಿಡಿಜೆ ಡಾ.ನಾಗಾರ್ಜುನ್ ಮಾತನಾಡಿ, ನಿಮ್ಮ ಸಮಾಜಮುಖಿ ಸೇವೆಗೆ ರೋಟರಿ ಸದಾ ಚಿರಋಣಿಯಾಗಿರುತ್ತದೆ. ಆಶ್ರಮದ ಸೇವಾ ಕಾರ್ಯಗಳೊಂದಿಗೆ ನಾವು ಸದಾ ಇರುತ್ತೇವೆ ಎಂದು ಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಕಳೆದ ಮೂರು ವರ್ಷದಿಂದ ನಮ್ಮ ಸಂಸ್ಥೆಯು ಶ್ರೀಅನುಲಕ್ಷ್ಮೀ ಸೇವಾ ಆಶ್ರಮದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸೈಕಲ್ ಅಗರಬತ್ತಿ ಮಾಲೀಕ ಗುರು ಅವರು ಅವಶ್ಯಕ ವಸ್ತುಗಳನ್ನು ನೀಡುತ್ತಾ ಬಂದಿದ್ದಾರೆ ಎಂದರು. ಸಂಸ್ಥೆಯ ಸಂಸ್ಥಾಪಕ ಸದಸ್ಯರಾದ ಸಿ.ವಿ.ಶ್ರೀನಿವಾಸಶೆಟ್ಟಿ, ಅಶ್ವಥ್‌ನಾರಾಯಣ್, ವಲಯ ಪ್ರತಿನಿಧಿ ಯೋಗರಾಜು, ನಾಗರಾಜು, ಚಂದ್ರಪ್ರಭಜೈನ್, ಟ್ರಸ್ಟ್‌ನ ಕಾರ್ಯದರ್ಶಿ ಮಹದೇವು ಇತರರು ಹಾಜರಿದ್ದರು.