ಚಾಮರಾಜನಗರದ ದೇವಾಂಗ ಬೀದಿಯಲ್ಲಿರುವ ದೊಡ್ಡ ಗರಡಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ಉಮಾರಾಣಿ, ಸುಬ್ರಮಣ್ಯ, ಹೇಮಂತ್ ಕುಮಾರ್, ಎಸ್.ಮಂಜುನಾಥ್, ನವೀನ್, ಮಹೇಶ್‌ಕುಮಾರ್, ಅನಂತ ಕೃಷ್ಣ ಇದ್ದರು. 
ಚಾಮರಾಜನಗರ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ರಾಜಣ್ಣ
ಚಾಮರಾಜನಗರ: ನಗರದ ದೇವಮಲ್ಲು ಜೆಟ್ಟಿ ಮತ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದೇವಾಂಗ ಬೀದಿಯಲ್ಲಿರುವ ದೊಡ್ಡ ಗರಡಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೈದ್ಯಾದಿಕಾರಿ ಡಾ.ಉಮಾರಾಣಿ, ವಿದ್ಯಾರ್ಥಿಗಳಿಗೆ ನಗದು, ಸ್ಮರಣಿಕೆ ನೀಡಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಜೆಟ್ಟಿ ಜನಾಂಗದ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಜನಾಂಗಕ್ಕೆ ಕೀರ್ತಿ ತಂದಿದ್ದಾರೆ. ಮುಂದೆ ಭವಿಷ್ಯ ರೂಪಿಸಿಕೊಳ್ಳಲು ಈ ಉನ್ನತಿ ಬಹಳ ಮುಖ್ಯ ಎಂದು ಹೇಳಿದರು.
ಜೆಟ್ಟಿ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಿರಂತರವಾಗಿ ನಡೆಯಬೇಕು. ಈ ಸದುದ್ದೇಶಕ್ಕಾಗಿ ನಾನು ಒಂದು ಲಕ್ಷ ರೂ.ದೇಣಿಗೆ ನೀಡುವುದಾಗಿ ಘೋಷಿಸಿ, ಸ್ಥಳದಲ್ಲೇ ಸಂಘದ ಪದಾಧಿಕಾರಿಗಳಿಗೆ ಒಂದು ಲಕ್ಷ ರೂ.ಚೆಕ್ ಹಸ್ತಾಂತರಿಸಿದರು.
ಸಂಘದ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ, ದೊಡ್ಡ ಗರಡಿ ದೇವಾಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಜೆಟ್ಟಿ ಜನಾಂಗದ ಪ್ರತಿಯೊಬ್ಬರೂ ಉದಾರತೆಯಿಂದ ದೇಣಿಗೆ ನೀಡುತ್ತಾ ಬಂದಿದ್ದಾರೆ. ಈ ವರ್ಷದಿಂದ ಆರಂಭಿಸಿರುವ ಈ ಪ್ರತಿಭಾ ಪುರಸ್ಕಾರ ಪ್ರತೀ ವರ್ಷ ನಡೆಯಲಿದೆ. ಇದಕ್ಕಾಗಿ ಜನಾಂಗದವರು ಮುಂದೆಯೂ ಸಹಕಾರ ನೀಡಬೇಕು. ಈ ತನಕ ಎಲ್ಲ ಕಾರ್ಯಗಳಿಗೂ ದೇಣಿಗೆ ನೀಡಿದವರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದೇವಾಲಯ ಸಮಿತಿ ಸದಸ್ಯ ಹೇಮಂತ್ ಕುಮಾರ್, ಜೆಟ್ಟಿ ಜನಾಂಗದ ಇತಿಹಾಸದ ಬಗ್ಗೆ ಸುದೀರ್ಘವಾಗಿ ವಿವರಿಸಿ, ಜನಾಂಗದ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಪಾಲಕರು ಮತ್ತು ಜನಾಂಗಕ್ಕೆ ಹೆಮ್ಮೆ ತರಲಿದೆ ಎಂದು ಹೇಳಿದರು.
ಪ್ರತಿಭಾ ಪುರಸ್ಕಾರಕ್ಕಾಗಿ ಸತ್ಯನಾರಾಯಣ ಜೆಟ್ಟಿ (ನಾಣಿ) ನೀಡಿದ್ದ ದೇಣಿಗೆಯನ್ನು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವಾಗಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕವನ್ನೂ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಎಸ್.ಮಂಜುನಾಥ್, ಕಾರ್ಯದರ್ಶಿ ನವೀನ್, ಖಜಾಂಚಿ ಮಹೇಶ್‌ಕುಮಾರ್, ಸಹ ಕಾರ್ಯದರ್ಶಿ ಅನಂತಕೃಷ್ಣ ಹಾಗೂ ಜನಾಂಗದ ಯಜಮಾನರು ಭಾಗವಹಿಸಿದ್ದರು.