ನಗರದ ಛಲವಾದಿ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಅವರು ಮಾತನಾಡಿ, ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ದೊಡ್ಡಬಸ್ತಿ, ಛಲವಾದಿ ಭವನದಲ್ಲಿ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ವಾಣಿ ಶಿವರಾಮು ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ಪ್ರಾರಂಭವಾಗಲಿದೆ.  
ಚಾಮರಾಜನಗರ

ಸೆ.20 ರಂದು ಬೆಂಗಳೂರಿನಲ್ಲಿ ಛಲವಾದಿ ಮಹಾಸಭಾದ ವಾರ್ಷಿಕ ಸಭೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ನಗರದ ಛಲವಾದಿ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಸಭೆ
  • ಛಲವಾಧಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಕುಮಾರ್ ಮಾಹಿತಿ.
ಚಾಮರಾಜನಗರ: ಛಲವಾದಿ ಮಹಾಸಭಾದ 2025-26ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಸೆ.20ರಂದು ಹಮ್ಮಿಕೊಳ್ಳಲಾಗಿದೆ ಎಂದು ಛಲವಾಧಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್.ಕುಮಾರ್ ತಿಳಿಸಿದರು.
ನಗರದ ಛಲವಾದಿ ಮಹಾಸಭಾದ ಜಿಲ್ಲಾ ಕಚೇರಿಯಲ್ಲಿ ಅವರು ಮಾತನಾಡಿ, ಬೆಂಗಳೂರಿನ ವಿಶ್ವೇಶ್ವರಯ್ಯ ಬಡಾವಣೆಯ ದೊಡ್ಡಬಸ್ತಿ, ಛಲವಾದಿ ಭವನದಲ್ಲಿ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ವಾಣಿ ಶಿವರಾಮು ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ಪ್ರಾರಂಭವಾಗಲಿದೆ. ಈ ಸಭೆಗೆ ಛಲವಾದಿ ಮಹಾಸಭಾದ ನೋಂದಾಯಿತ ಎಲ್ಲ ಸದಸ್ಯರಿಗೆ ಈಗಾಗಲೇ ಅಂಚೆಯ ಮೂಲಕ ಸೂಚನಾ ಪತ್ರಗಳನ್ನು ರವಾನಿಸಲಾಗಿದೆ. ಕೆಲ ಸದಸ್ಯರಿಗೆ ಸಕಾಲದಲ್ಲಿ ಸೂಚನಾ ಪತ್ರ ತಲುಪದೇ ಇದ್ದಲ್ಲಿ, ಈ ಪ್ರಕಟಣೆಯನ್ನೇ ಸಭೆಯ ಸೂಚನಾ ಪತ್ರವೆಂದು ಪರಿಗಣಿಸಿ, ನಿಗದಿತ ಸಮಯಕ್ಕೆ ಸಭೆಗೆ ಹಾಜರಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ನಿರ್ಣಯಗಳನ್ನು ಅಂಗೀಕರಿಸುವಂತೆ ಹೇಳಿದರು.
ಜಿಲ್ಲೆಯಿಂದ ಸಭೆಗೆ ಆಗಮಿಸುವ ಛಲವಾದಿ ಮಹಾಸಭಾದ ಸದಸ್ಯರು ಕಡ್ಡಾಯವಾಗಿ ಗುರುತಿನ ಚೀಟಿ, ಸದಸ್ಯತ್ವದ ರಸೀದಿ ಹಾಗೂ ಅಗತ್ಯ ಇತರೆ ದಾಖಲಾತಿಗಳನ್ನು ತರಬೇಕು. ಸೆ.20 ರಂದು ಬೆಳಗ್ಗೆ 7 ಗಂಟೆಗೆ ನಗರದ ಶ್ರೀ ಭುವನೇಶ್ವರಿ ವೃತ್ತದಿಂದ ಬಸ್ ಹೊರಡಲಿದ್ದು, ಗುಂಡ್ಲುಪೇಟೆ ಪದಾಧಿಕಾರಿಗಳು ಸರಿಯಾದ ಸಮಯಕ್ಕೆ ಬರಬೇಕು. ಯಳಂದೂರು, ಕೊಳ್ಳೇಗಾಲ ಹಾಗೂ ಹನೂರು ಭಾಗದ ಸದಸ್ಯರು ಬಸ್ ಮಾರ್ಗಮಧ್ಯೆ ಕೂಡಿಕೊಳ್ಳಬೇಕು. ಛಲವಾದಿ ಮಹಾಸಭಾದ ಅಭಿವೃದ್ಧಿಗೆ ಸದಸ್ಯರು ಸಹಕಾರ ನೀಡುವ ಮೂಲಕ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ನಾರಾಯಣ್, ತಾಲೂಕು ಘಟಕದ ಪರಮೇಶ್, ಅಶೋಕ್ ಹಾಜರಿದ್ದರು.