ಪಟ್ಟಣದ ಉಪ ಅಧೀಕ್ಷಕರ ಕಚೇರಿಯಲ್ಲಿ ಮಂಗಳವಾರ ಯುಗಾದಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಉಪವಿಭಾಗ ಮಟ್ಟದ ಶಾಂತಿ ಸಭೆ ಯಲ್ಲಿ ಡಿವೈಎಸ್ಪಿ ಧಮೇಂದ್ರ ಮಾತನಾಡಿದರು. ಮಹದೇವಸ್ವಾಮಿ ಮಧು ವನಹಳ್ಳಿ, ಮಧುಚಂದ್ರ, ಅಸೀಫ್ ದಿನಹಳ್ಳಿ ಇತರರಿದ್ದರು.
- ಎಂದು ಡಿವೈಎಸ್ಪಿ ಎಂ.ಧಮೇಂದ್ರ ಸೂಚನೆ
- ಉಪವಿಭಾಗ ಮಟ್ಟದ ಶಾಂತಿ ಸಭೆ
ಕೊಳ್ಳೇಗಾಲ: ಯುಗಾದಿ ಮತ್ತು ರಂಜಾನ್‌ನಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಡಿವೈಎಸ್ಪಿ ಎಂ.ಧಮೇಂದ್ರ ತಿಳಿಸಿದರು.
ಪಟ್ಟಣದ ಉಪ ಅಧೀಕ್ಷಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಯುಗಾದಿ ಮತ್ತು ರಂಜಾನ್ ಹಬ್ಬದ ಅಂಗವಾಗಿ ಕರೆಯಲಾಗಿದ್ದ ಉಪವಿಭಾಗ ಮಟ್ಟದ ಶಾಂತಿ ಸಭೆ ಉದ್ದೇಶಿಸಿ ಮಾತನಾಡಿದರು.
ಇಲ್ಲಿಯವರೆವಿಗೂ ಕೊಳ್ಳೇಗಾಲ ಉಪವಿಭಾಗದಲ್ಲಿ ಹಿಂದೂ ಮತ್ತು ಮುಸಲ್ಮಾನರು ಅನ್ಯೋನ್ಯವಾಗಿ ತಮ್ಮ ಧಾರ್ಮಿಕ ಹಬ್ಬಗಳ ಆಚರಣೆ ನಡೆಸಿಕೊಂಡು ಬಂದಿದ್ದಾರೆ. ಅಂತೆಯೇ, ಮುಂಬರುವ ಯುಗಾದಿ, ರಂಜಾನ್ ಹಿನ್ನೆಲೆ ಸೌಹಾರ್ದತೆ ಸಾಮರಸ್ಯ, ಶಾಂತಿಯಿಂದ ಹಬ್ಬವನ್ನು ಅಚರಣೆ ಮಾಡಬೇಕೆಂದು ಪೊಲೀಸ್ ಇಲಾಖೆ ಈ ಶಾಂತಿ ಸಭೆ ಕರೆದಿದೆ. ಹಬ್ಬದ ಹಿನ್ನೆಲೆ ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಕಲ್ಪಿಸುತ್ತದೆ. ಜನರ ಆಚರಣೆಗಳಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ. ಅದೇ ರೀತಿ ಪೊಲೀಸ್ ಇಲಾಖೆಯೊಂದಿಗೆ ಸಾರ್ಜನಿಕರು ಸಹಕರಿಸಬೇಕು ಎಂದರು.
ಹಬ್ಬದ ಹಿನ್ನೆಲೆ ಶುಭಾಶಯ ತಿಳಿಸುವ ಫ್ಲೆಕ್ಸ್ ಅಳವಡಿಸುವುದು ರೂಢಿ ಯಲ್ಲಿರುತ್ತದೆ. ಇದಕ್ಕೆ ಗ್ರಾಮಾಂತರ ಪ್ರದೇಶದ ಜನರು ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣ ಪ್ರದೇಶದಲ್ಲಿ ನಗರಸಭೆ ವತಿಯಿಂದ ಅನುಮತಿ ಪಡೆದು ಫ್ಲೆಕ್ಸ್ ಅಳವಡಿಸಬೇಕು. ಅಧಿಕಾರಿಗಳು ಸೂಚಿಸಿದ ಸ್ಥಳದಲ್ಲಿ ಅಳವಡಿಸಬೇಕು. ಹಬ್ಬದ ನಂತರ ತೆರವು ಮಾಡಬೇಕು ಎಂದರು.
ತ್ರಿಬಲ್ ರೈಡ್ ಮಾಡಿದರೆ ಕ್ರಮ:ಹಬ್ಬಗಳಲ್ಲಿ ಅಪ್ರಾಪ್ತರು ಬೈಕ್ ಚಲಾಯಿಸುವುದು ಹಾಗೂ ತ್ರಿಬಲ್ ರೈಡಿಂಗ್ ಮಾಡಿದರೆ ಪೊಲೀಸ್ ಇಲಾಖೆ ಕ್ರಮವಹಿಸಲಿದೆ. ಪಾಲಕರು ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಬಾರದು. ನಿಯಮನ್ನು ಉಲ್ಲಂಘನೆ ಮಾಡಿದರೆ ಪಾಲಕರ ಮೇಲು ಕಾನೂನಾತ್ಮಕ ಕ್ರಮವಾಗಲಿದೆ ಎಂಬುದನ್ನು ತಿಳಿದುಕೊಳ್ಳಬೇಕು ಡಿವೈಎಸ್ಪಿ ಧಮೇಂದ್ರ ತಿಳಿಸಿದರು.
ಮಹದೇವಸ್ವಾಮಿ ಮಧು ವನಹಳ್ಳಿ, ಮಧುಚಂದ್ರ, ಅಸೀಫ್ ದಿನಹಳ್ಳಿ, ಅಬ್ಜಲ್ ಖಾನ್ ಕುರುಬರದೊಡ್ಡಿ, ಕೆ. ಬಾಬು ರಾಮಾಪುರ, ಶಬೀರ್ ಕೌದಳ್ಳಿ, ಅಫ್ರೋಜ್ ಖಾನ್ ಹನೂರು, ಇಮ್ರಾನ್ ಮತ್ತಿತರಿದ್ದರು