ಯಳಂದೂರು ಪಟ್ಟಣದ ಈದ್ಗಾ ಮೈದಾನದಲ್ಲಿ ಶನಿವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಭೇಟಿ ನೀಡಿ, ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು.  
ಚಾಮರಾಜನಗರ

ಸಂಭ್ರಮದಿಂದ ಈದ್-ಉಲ್‌ಫಿತರ್ ಆಚರಣೆ

ಲೋಕೇಶ್ ಮನು. ಡಿ
ಯಳಂದೂರು: ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಮುಸ್ಲಿಮರು ಈದ್-ಉಲ್‌ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಜಾಮೀಯಾ ಮಸೀದಿಯಿಂದ ಬೆಳಗ್ಗೆ 9ಕ್ಕೆ ನೂರಾರು ಸಂಖ್ಯೆಯ ಮುಸ್ಲಿಮರು ಒಗ್ಗೂಡಿ ಪಟ್ಟಣದ ಕೆ.ಕೆ. ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡರು. ನಂತರ ಇಲ್ಲಿನ ಮುಸ್ಲಿಂ ಧಾರ್ಮಿಕ ಗುರುಗಳಾದ ಅಬ್ರಾರ್ ಅಹಮ್ಮದ್ ಈ ಹಬ್ಬದ ವಿಶೇಷತೆಗಳ ಬಗ್ಗೆ ಧಾರ್ಮಿಕ ಪ್ರವಚನ ನೀಡಿದರು. ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹಬ್ಬದ ನಿಮಿತ್ತ ಪರಸ್ಪರರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ತಾಲೂಕಿನ ಮಾಂಬಳ್ಳಿ, ಗುಂಬಳ್ಳಿ, ಯರಗಂಬಳ್ಳಿ ಸಮೀಪದ ಚಾಟೀಪುರ, ಹೊಂಗನೂರು ಸೇರಿದಂತೆ ಅನೇಕ ಗ್ರಾಮಗಳಲ್ಲೂ ಸಂಭ್ರಮದಿಂದ ಹಬ್ಬ ಆಚರಣೆ ಮಾಡಲಾಯಿತು.
ಶುಭಾಶಯ ಕೋರಿದ ಶಾಸಕ ಎಆರ್‌ಕೆ: ಈದ್ಗಾ ಮೈದಾನಕ್ಕೆ ಶಾಸಕ ಎ.ಆರ್. ಕೃಷ್ಣಮೂರ್ತಿ ಭೇಟಿ ನೀಡಿ ಮುಸ್ಲಿಮರಿಗೆ ಹಬ್ಬದ ಶುಭಾಶಯ ಕೋರಿದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾದ್ಯಕ್ಷ ಜೆ. ಯೋಗೇಶ್, ಪಪಂ ಮಾಜಿ ಸದಸ್ಯ ವೈ.ಜಿ.ರಂಗನಾಥ, ನಾಮನಿರ್ದೇಶಿತ ಸದಸ್ಯರಾದ ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ನಯಾಜ್‌ಖಾನ್, ಇರ್ಫಾನ್, ಜಮೀರ್, ಪ್ರದೀಪ್ ಇತರು ಇದ್ದರು.