ಗೇರಟ್ಟಿ ಗ್ರಾಮದ ಜಮೀನೊಂದರಲ್ಲಿ ಸೀಳು ನಾಯಿಗಳ ದಾಳಿಗೆ ಬಲಿಯಾದ ಕರುವಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.  
ಚಾಮರಾಜನಗರ

ಸೀಳು ನಾಯಿಗಳ ದಾಳಿಗೆ ಕರು ಬಲಿ

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇರಟ್ಟಿ ಗ್ರಾಮದ ಜಮೀನೊಂದರಲ್ಲಿ ಬುಧವಾರ ಸೀಳು ನಾಯಿಗಳ ದಾಳಿಗೆ ಕರು ಬಲಿಯಾಗಿದೆ.
ಗ್ರಾಮದ ಪ್ರಕಾಶ್ ವರ ಜಮೀನಿಗೆ ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿದ ಸೀಳುನಾಯಿಗಳ ಹಿಂಡು ಸಮೀಪದಲ್ಲಿ ಜನರಿದ್ದರೂ ಏಕಾಎಕಿ ಕರುವಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಓಡಿಸಲು ಮುಂದಾದರೂ ಸೀಳು ನಾಯಿಗಳು ದಾಳಿ ನಡೆಸಲು ಮುಂದಾದಾಗ ಜನರು ಆತಂಕಗೊಂಡರು. ಸೀಳು ನಾಯಿಗಳು ಅರಣ್ಯ ಪ್ರದೇಶದತ್ತ ಓಟ ಕಿತ್ತ ಬಳಿಕ ಜನರು ಸ್ಥಳಕ್ಕೆ ತೆರಳಿ ನೋಡಿದಾಗ ಕರು ಮೃತಪಟ್ಟಿತ್ತು.
ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಿಗರ ವಿಜಯಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಪೊನ್ನಾಚಿ ರಾಜು ಅವರು ಸುದ್ದಿ ತಿಳಿಸಲಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಸೂಕ್ತ ಪರಿಹಾರ ನೀಡುವಂತೆ ಹಾಗೂ ಕಾಡು ಪ್ರಾಣಿಗಳು ಗ್ರಾಮದತ್ತ ಬಾರದಂತೆ ಅಗತ್ಯ ಕ್ರಮವಹಿಸುವಂತೆ ಸ್ಥಳೀಯರು ಒತ್ತಾಯಿಸಿದಾಗ, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಿಬ್ಬಂದಿ ತಿಳಿಸಿದರು.