ಗಂಗನದೊಡ್ಡಿಯಲ್ಲಿ ಚಿರತೆ ದಾಳಿಗೆ ಗಾಯಗೊಂಡ ಕರು.  
ಚಾಮರಾಜನಗರ

ಚಿರತೆ ದಾಳಿಯಿಂದ ಕರುವಿಗೆ ಗಾಯ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಗಂಗನದೊಡ್ಡಿ ಗ್ರಾಮ
  • ಚಿರತೆ ಹಾವಳಿ
ಹನೂರು: ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಚಿರತೆ ಹಾವಳಿ ಮುಂದುವರಿದಿದ್ದು, ಗುರುವಾರ ಕರುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ಗ್ರಾಮದ ತೋಟದ ಮನೆ ನಿವಾಸಿ ಅಬ್ದುಲ್ ಅವರು ಕೊಟ್ಟಿಗೆಯಲ್ಲಿ ಹಸು ಹಾಗೂ ಕರು ಕಟ್ಟಿ ಹಾಕಿದ್ದರು. ಬೆಳಗಿನ ಜಾವ 5ಗಂಟೆ ಸಮಯದಲ್ಲಿ ಕೊಟ್ಟಿಗೆಗೆ ಬಂದ ಚಿರತೆ ಕರುವಿನ ಮೇಲೆ ದಾಳಿ ನಡೆಸಿದೆ.
ಕರುವಿನ ಚೀರಾಟದ ಶಬ್ದ ಕೇಳಿ ದೂರದಲ್ಲೇ ಗಮನಿಸಿದ ಅಬ್ದುಲ್ ಶಬ್ದ ಮಾಡಿದಾಗ ಚರತೆ ಸ್ಥಳದಿಂದ ಕಾಲ್ಕಿತ್ತಿದೆ. ಸ್ಥಳಕ್ಕೆ ತೆರಳಿ ನೋಡಿದಾಗ ಕರುವಿನ ಮುಖ ಗಾಯಗೊಂಡಿತ್ತು. ಮಾಹಿತಿ ತಿಳಿದು ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ಆಗಮಿಸಿ ಪರಿಶೀಲಿಸಿದರು.