ಗುಂಡ್ಲುಪೇಟೆ ತಾಲೂಕಿನ ವಡ್ಡನಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಕಳ್ಳರು ಕೇಬಲ್ ಕತ್ತರಿಸಿದ್ದಾರೆ. 
ಚಾಮರಾಜನಗರ

ಪಂಪ್‌ಸೆಟ್‌ಗಳಲ್ಲಿ ಕೇಬಲ್ ಕಳವು

ನಾಗೇಶ ಎಸ್
ಗುಂಡ್ಲುಪೇಟೆ: ತಾಲೂಕಿನ ವಡ್ಡನಹೊಸಹಳ್ಳಿ ಗ್ರಾಮದಲ್ಲಿ ಕಳ್ಳರು ಐದು ಪಂಪ್‌ಸೆಟ್‌ಗಳಲ್ಲಿ ಕೇಬಲ್ ಕದ್ದೊಯ್ದಿದ್ದಾರೆ. ಮಂಗಳವಾರ ರಾತ್ರಿ ಗ್ರಾಮದ ಸುರೇಶ್, ಪುಟ್ಟಶೆಟ್ಟಿ, ಗೋವಿಂದಶೆಟ್ಟಿ, ಬಸವರಾಜು ಹಾಗೂ ಬೆಳ್ಳಯ್ಯ ಎಂಬುವರ ಜಮೀನುಗಳಲ್ಲಿ ಪಂಪ್‌ಸೆಟ್‌ಗಳಿಗೆ ಅಳವಡಿಸಿದ್ದ ಸುಮಾರು 500ಕ್ಕೂ ಹೆಚ್ಚು ಮೀಟರ್ ಉದ್ದದ ಕೇಬಲ್ ಕಳವು ಮಾಡಿದ್ದಾರೆ. ಬುಧವಾರ ಬೆಳಗ್ಗೆ ಜಮೀನುಗಳಿಗೆ ರೈತರಿಗೆ ಹೋದಾಗ ಕಳ್ಳತನ ನಡೆದಿರುವುದು ತಿಳಿಸಿದ್ದು, ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.