ಹನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಮಲದಾಸ್ ಇತರರು ಇದ್ದರು.
ಹನೂರು: ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ. ಮಾದೇಶ ಆಯ್ಕೆಯಾದರು.
ಕಳೆದ 15 ದಿನದ ಹಿಂದೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-31ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ದಿನ್ನಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೃಷ್ಣೇಗೌಡ, ಮಂಗಲ ಶಾಲೆಯ ಎಂ.ಗಿರೀಶ್, ಮರೂರು ಶಾಲೆಯ ಪ್ರಧಾನ ಕಾರ್ಯದರ್ಶಿಯಾಗಿ ಆರ್. ಮಹಾದೇಶ, ಹನೂರು ಪಿಎಂಶ್ರೀ ಶಾಲೆಯ ಶಿವಮಲ್ಲು, ಹುತ್ತೂರು ಶಾಲೆಯ ಸಿ. ಮಾದೇಶ್, ಎಲ್ಲೇಮಾಳ ಶಾಲೆಯ ಶಿವಕುಮಾರಿ ಹಾಗೂ ರಾಮಾಪುರ ಶಾಲೆಯ ವಿ. ರೂಪಾಶ್ರೀ ಆಯ್ಕೆಯಾದರು.
ಶನಿವಾರ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಮಲ್ಲು ಹಾಗೂ ಸಿ. ಮಾದೇಶ ಸ್ಪರ್ಧಿಸಿದ್ದು, 4 ಮತಗಳನ್ನು ಪಡೆಯುವುದರ ಮೂಲಕ ಮಾದೇಶ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಆರ್. ಮಹಾದೇಶ, ಉಪಾಧ್ಯಕ್ಷರಾಗಿ ಎಂ. ಗಿರೀಶ್, ಖಜಾಂಚಿಯಾಗಿ ಶಿವಕುಮಾರಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಿವೃತ್ತ ಮುಖ್ಯ ಶಿಕ್ಷಕ ಅಮಲದಾಸ್ ಅವರು ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಈ ವೇಳೆ ಸಂಘದ ನೂತನ ಅಧ್ಯಕ್ಷ ಸಿ. ಮಾದೇಶ ಮಾತನಾಡಿ, 31 ವರ್ಷದ ಸೇವಾ ಅವಧಿಯಲ್ಲಿ ಇದೀಗ ಸಂಘದ ಅಧ್ಯಕ್ಷರಾಗಿ ಶಿಕ್ಷಕರ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಸಂತಸ ತಂದಿದೆ. ಸಮಸ್ಯೆ ಪರಿಹಾರಕ್ಕೆ ಸಂಪೂರ್ಣ ಸಹಕಾರ ನೀಡುವ ಮೂಲಕ ಶಿಕ್ಷಕರ ಏಳಿಗೆಗೆ ಪ್ರಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು.