ಕೊಳ್ಳೇಗಾಲದ ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಜ್ ಇಂಡಿಯಾ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೆಂಕಟೇಶ್, ಮಹದೇವಯ್ಯ, ಎ.ವಿ.ಸ್ವಾತಿ, ಎನ್. ಪುಟ್ಟತಾಯಮ್ಮ, ಮಮತಾ ಇತರರು ಇದ್ದರು.
- ಬಜ್ ಇಂಡಿಯಾ ಟ್ರಸ್ಟ್‌ನ ಯೋಜನಾ ವ್ಯವಸ್ಥಾಪಕ ಜೆ.ಎಸ್.ವೆಂಕಟೇಶ್
- ಶ್ರೀ ಉಮಾಶಂಕರ ಕಲ್ಯಾಣ ಮಂಟಪ
ಕೊಳ್ಳೇಗಾಲ: ಮಹಿಳೆಯರ ಸಬಲೀಕರಣಕ್ಕೆ ಬಜ್ ಇಂಡಿಯಾ ಟ್ರಸ್ಟ್ ಶ್ರಮಿಸುತ್ತಿದೆ ಎಂದು ಬಜ್ ಇಂಡಿಯಾ ಟ್ರಸ್ಟ್‌ನ ಯೋಜನಾ ವ್ಯವಸ್ಥಾಪಕ ಜೆ.ಎಸ್.ವೆಂಕಟೇಶ್ ಹೇಳಿದರು.
ಪಟ್ಟಣದ ಶ್ರೀ ಉಮಾಶಂಕರ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಜ್ ಇಂಡಿಯಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು. ಮಾ.8ರಂದು ಸಾಮಾನ್ಯವಾಗಿ ಮಹಿಳೆಯರ ದಿನ ಆಚರಿಸಲಾಗುತ್ತದೆ. ಆ ಮೂಲಕ ಮಹಿಳೆಯರಿಗೆ ಗೌರವ ಸೂಚಿಸಲಾಗುತ್ತದೆ. ಆದರೆ ನಮ್ಮ ಸಂಸ್ಥೆ ಮಹಿಳೆಯ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ವರ್ಷದ ಪ್ರತಿ ದಿನವೂ ರೂಪಿಸುತ್ತದೆ. ಆ ಮೂಲಕ ವರ್ಷದ 365 ದಿನಗಳು ಮಹಿಳಾ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದರು.
ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಾದ ಎಲ್ಲ ತಯಾರಿಯನ್ನು ತರಬೇತಿ ಮೂಲಕ ತಿಳಿಸಲಾಗುತ್ತದೆ. ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿಸಿ ಅವರ ಸಬಲೀಕರಣಕ್ಕೆ ಸಂಸ್ಥೆ ಶ್ರಮಿಸುತ್ತದೆ. ನಮ್ಮ ಸಂಸ್ಥೆ 2012 ರಲ್ಲಿ ಪ್ರಾರಂಭಗೊಂಡು ರಾಜ್ಯದ 15 ಜಿಲ್ಲೆಗಳಲ್ಲಿ 18 ಸಾವಿರ ಹಳ್ಳಿಗಳಲ್ಲಿ ಮಹಿಳೆಯ ಸಮಗ್ರ ಅಭಿವೃದ್ಧಿಗೆ ದುಡಿಯುತ್ತಿದೆ ಎಂದು ಮಾಹಿತಿ ನೀಡಿದರು.
ನಿವೃತ್ತ ತಹಸೀಲ್ದಾರ್ ಮಹದೇವಯ್ಯ ಮಾತನಾಡಿ, ಬಜ್ ಸಂಸ್ಥೆಯಿಂದ ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.
ಮೈಸೂರಿನ ಇಂಡಿಯನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸೀನಿಯರ್ ಬ್ಯಾಂಕ್ ಮ್ಯಾನೇಜರ್ ಎ.ವಿ.ಸ್ವಾತಿ, ಪ್ರಗತಿಪರ ರೈತ ಮಹಿಳೆ ಎನ್.ಪುಟ್ಟತಾಯಮ್ಮ, ಚಾಮರಾಜನಗರ ಬಜ್ ಇಂಡಿಯಾ ಟ್ರಸ್ಟ್ ಮ್ಯಾನೇಜರ್ ಮಮತಾ ಮತ್ತಿತರರಿದ್ದರು.