ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯದಲ್ಲಿ ಚಾಮರಾಜನಗರದ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಹೂ ಕೊಟ್ಟು ಸ್ವಾಗಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪಾಟೀಲ್ ಮತ್ತು ಶಿಕ್ಷಕರು ಇದ್ದರು. 
ಚಾಮರಾಜನಗರ

ಎಸ್ಸೆಸ್ಸೆಲ್ಸಿ ಪರೀಕ್ಷೆ ರಾಜ್ಯದಲ್ಲಿ 30ನೇ ಸ್ಥಾನಕ್ಕೆ ಇಳಿದ ಗಡಿಜಿಲ್ಲೆ

ಪ್ರಮುಖ ಮುಖ್ಯಾಂಶಗಳು

  • ಶೇ.91.89ರಷ್ಟು ರಿಸಲ್ಟ್, ಶೇಕಡವಾರು ಸುಧಾರಣೆ
  • ಕೊಳ್ಳೇಗಾಲದ ವಿದ್ಯಾರ್ಥಿಗಳು ಟಾಪರ್
ಚಾಮರಾಜನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶದಲ್ಲಿ ರಾಜ್ಯದ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದ್ದು, ಈ ಸಲವೂ ತನ್ನ ವಾಡಿಕೆಯನ್ನು ಮುಂದುವರೆಸಿದೆ. ಆದರೆ ಶೇಕಡವಾರು ಲಿತಾಂಶದಲ್ಲಿ ಸುಧಾರಣೆಯಾಗಿದೆ.
2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಲಿತಾಂಶ ಗುರುವಾರ ಹೊರಬಿದ್ದಿದೆ. ರಾಜ್ಯದಲ್ಲಿ ಜಿಲ್ಲೆ 30ನೇ ಸ್ಥಾನಕ್ಕೆ ಇಳಿದಿದೆ. 2025ರಲ್ಲಿ 27ನೇ ಸ್ಥಾನ ಪಡೆದುಕೊಂಡಿತ್ತು. 2024ರಲ್ಲಿ 24ನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ವರ್ಷ 83.16ರಷ್ಟು ಲಿತಾಂಶವಿತ್ತು. ಆದರೆ ಈ ಸಲ ಶೇ.91.89ರಷ್ಟು ಉತ್ತಮ ಲಿತಾಂಶ ಬಂದಿದೆ. 10544 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 9424 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಯ 5133 ವಿದ್ಯಾರ್ಥಿಗಳಲ್ಲಿ 4575 (ಶೇ.89.13) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನಿತ ಶಾಲೆಯ 2611ರಲ್ಲಿ 2335(ಶೇ.89.43) ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅನುದಾನ ರಹಿತ ಶಾಲೆಗಳ 2800ರಲ್ಲಿ 2714 (ಶೇ.96.93)ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೊಳ್ಳೇಗಾಲ-ಶೇ.96.13, ಹನೂರು-ಶೇ.95.98, ಗುಂಡ್ಲುಪೇಟೆ-ಶೇ.93.03, ಯಳಂದೂರು-ಶೇ.92.23, ಚಾಮರಾಜನಗರ ಶೇ.84.48ರಷ್ಟು ಲಿತಾಂಶ ಲಭಿಸಿದೆ.
ಕೊಳ್ಳೇಗಾಲದ ವಿದ್ಯಾರ್ಥಿಗಳು ಟಾಪರ್:
ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವ ಕೊಳ್ಳೇಗಾಲ ತಾಲೂಕಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ್ದಾರೆ. ವಾಸವಿ ವಿದ್ಯಾಕೇಂದ್ರದ ಎಂ.ರಿಷಿತಾ 625ಕ್ಕೆ 623 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನಪಡೆದುಕೊಂಡಿದ್ದಾಳೆ. ಕೊಳ್ಳೇಗಾಲದ ಆದರ್ಶ ವಿದ್ಯಾಲಯದ ನಿಹಾರಿಕಾ 620 ಮತ್ತು ವಾಸವಿ ವಿದ್ಯಾಕೇಂದ್ರದ ಸಿಂಚನಾ ಸತೀಶ್ 620 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಎನ್.ದೀಪಿಕಾ 619, ಗುಂಡ್ಲಪೇಟೆಯ ಆದರ್ಶ ವಿದ್ಯಾಲಯದ ಆರ್.ಪ್ರತಿಭಾ 618, ಕೊಳ್ಳೇಗಾಲದ ವಾಸವಿ ವಿದ್ಯಾಕೇಂದ್ರದ ತನ್ಮಯ್ 618, ಹನೂರಿನ ಕೆಂಪಯ್ಯನಹಟ್ಟಿ ಸರ್ಕಾರಿ ಪ್ರೌಢಶಾಲೆಯ ಶಭರಿ 618 ಅಂಕ ಗಳಿಸಿದ್ದಾರೆ.
59 ಶಾಲೆಗಳಿಗೆ ಶೇ.100ರಷ್ಟು ಲಿತಾಂಶ
ಪರೀಕ್ಷೆಯಲ್ಲಿ ಜಿಲ್ಲೆಯ 44 ಶಾಲೆಗಳಿಗೆ ಶೇ.100ರಷ್ಟು ಲಿತಾಂಶ ಬಂದಿದೆ. ಚಾಮರಾಜನಗರ ತಾಲೂಕಿನ 9, ಗುಂಡ್ಲುಪೇಟೆ ತಾಲೂಕಿನ 10, ಹನೂರು ತಾಲೂಕಿನ 12, ಕೊಳ್ಳೇಗಾಲ ತಾಲೂಕಿನ 12, ಯಳಂದೂರಿನ 1 ಶಾಲೆ ಶೇ.100ರಷ್ಟು ಲಿತಾಂಶ ಪಡೆದುಕೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಗುಂಡ್ಲುಪೇಟೆಯ ಆದರ್ಶ ವಿದ್ಯಾಲಯ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕೆಂಪದೇವಮ್ಮ ಸರ್ಕಾರಿ ಜೂನಿಯರ್ ಕಾಲೇಜು(ಪ್ರೌಢಶಾಲೆ ವಿಭಾಗ), ಹನೂರು ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ-2, ಇಂದಿರಾ ಗಾಂಧಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಯಳಂದೂರಿನ ಮೊರಾರ್ಜಿ ದೇಸಾಯಿ ಶಾಲೆಗಳ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100ರಷ್ಟು ಲಿತಾಂಶ ತಂದಿದ್ದಾರೆ.
59 ಶಾಲೆಗಳಿಗೆ ಶೇ.100ರಷ್ಟು ಲಿತಾಂಶ
ಪರೀಕ್ಷೆಯಲ್ಲಿ ಜಿಲ್ಲೆಯ 44 ಶಾಲೆಗಳಿಗೆ ಶೇ.100ರಷ್ಟು ಲಿತಾಂಶ ಬಂದಿದೆ. ಚಾಮರಾಜನಗರ ತಾಲೂಕಿನ 11, ಗುಂಡ್ಲುಪೇಟೆ ತಾಲೂಕಿನ 17, ಹನೂರು ತಾಲೂಕಿನ 14, ಕೊಳ್ಳೇಗಾಲ ತಾಲೂಕಿನ 15, ಯಳಂದೂರಿನ 2 ಶಾಲೆ ಶೇ.100ರಷ್ಟು ಲಿತಾಂಶ ಪಡೆದುಕೊಂಡಿದೆ. ನಗರ ಪ್ರದೇಶದಲ್ಲಿ ಶೇ.92.64 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.9045ರಷ್ಟು ಲಿತಾಂಶ ಲಭಿಸಿದೆ. ಕನ್ನಡ ಮಾಧ್ಯಮಕ್ಕೆ ಶೇ.96.95 ಮತ್ತು ಆಂಗ್ಲ ಮಾಧ್ಯಮಕ್ಕೆ ಶೇ.87.98ರಷ್ಟು ಲಿತಾಂಶ ಬಂದಿದೆ.