ಹನೂರಿನಲ್ಲಿ ನಡೆಯುವ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರದ ಕರಪತ್ರವನ್ನು ರೈತರು ಅಜ್ಜೀಪುರದಲ್ಲಿ ವಿತರಿಸಿದರು. ಅಮ್ಜಾದ್‌ಖಾನ್, ಪಳನಿಸ್ವಾಮಿ, ರಾಜಮಣಿ, ಮುತ್ತುಲಕ್ಷ್ಮೀ ಇತರರಿದ್ದರು.  
ಚಾಮರಾಜನಗರ

ರಾಜೇಂದ್ರ ಶ್ರೀಗಳ ಜಯಂತಿ ಅಂಗವಾಗಿ ರಕ್ತದಾನ ಶಿಬಿರ

ವಿಜಯವಾಣಿ ಸುದ್ದಿಜಾಲ ಹನೂರು
ಹನೂರಿನಲ್ಲಿ ಡಿ.13ರಂದು ನಡೆಯುವ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ 110ನೇ ಜಯಂತಿ ಕಾರ್ಯಕ್ರಮದಲ್ಲಿ ರೈತ ಸಂಘದಿಂದ ಆಯೋಜಿಸಿರುವ ರಕ್ತದಾನ ಶಿಬಿರಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಸ್ವಿಗೊಳಿಸುವಂತೆ ತಾಲೂಕು ರೈತ ಸಂಘದ ಅಧ್ಯಕ್ಷ ಅಮ್ಜಾದ್‌ಖಾನ್ ತಿಳಿಸಿದರು.
ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿಯಲ್ಲಿ ರಕ್ತದಾನ ಶಿಬಿರ ಸಂಬಂಧ ಕರಪತ್ರ ವಿತರಿಸಿ ಮಾತನಾಡಿದರು.
ರಕ್ತದಾನ ಮಹದಾನ, ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಮತ್ತೊಂದು ಜೀವ ಉಳಿಸಲು ಸಹಕಾರಿಯಾಗಿದೆ. ಈ ದೆಸೆಯಲ್ಲಿ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ ಸಂಘದಿಂದ ಆಯೋಜಿಸಿರುವ ರಕ್ತದಾನ ಶಿಬಿರಕ್ಕೆ ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಲೋಕೇಶ್‌ಗೌಡ, ತಾಲೂಕು ಗೌರವಾಧ್ಯಕ್ಷ ರಾಜಣ್ಣ, ಮಹಿಳಾ ಘಟಕದ ಅಧ್ಯಕ್ಷೆ ರಾಜಮಣಿ, ಗ್ರಾಮ ಘಟಕದ ಅಧ್ಯಕ್ಷ ಪಳನಿಸ್ವಾಮಿ, ರೈತ ಮುಖಂಡರಾದ ವೇಲುಸ್ವಾಮಿ, ಚಿನ್ನಸ್ವಾಮಿ, ಬಾಲು, ಮುತ್ತುಲಕ್ಷ್ಮೀ ಹಾಗೂ ಇನ್ನಿತರರಿದ್ದರು.