ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರು ದೂರು ನೀಡಿದರು. ಸೂರ್ಯಕುಮಾರ್, ಸೋಮವಾರಪೇಟೆ ಗುರು, ಮಹೇಶ್, ಪ್ರವೀಣ್‌ನಾಯಕ್, ಹರದನಹಳ್ಳಿ ಪ್ರದೀಪ್ ಇತರರು ಹಾಜರಿದ್ದರು. 
ಚಾಮರಾಜನಗರ

ಮರಗಳ ಹನನ ದೂರು ಕೊಟ್ಟ ಬಿಜೆಪಿ ಯುವ ಮೋರ್ಚಾ

ಪ್ರಮುಖ ಮುಖ್ಯಾಂಶಗಳು

  • ಪಟ್ಟಣ ಠಾಣೆ ಪೊಲೀಸರಿಗೆ ಮಂಗಳವಾರ ದೂರು
  • ಅಭಿವೃದ್ದಿ ನೆಪದಲ್ಲಿ ಸಾಲು ಮರ ಹಾಗೂ ಸಸಿಗಳಿಗೆ ಹಾನಿ
ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನಗರಸಭೆಯು ಎರಡು ಬದಿಯ ುಟ್‌ಪಾತ್ ಅಭಿವೃದ್ದಿ ನೆಪದಲ್ಲಿ ಸಾಲು ಮರ ಹಾಗೂ ಸಸಿಗಳಿಗೆ ಹಾನಿ ಮಾಡಲಾಗುತ್ತಿದೆ. ಈ ಸಂಬಂಧ ನಗರಸಭೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಯುವ ಮೋರ್ಚಾದಿಂದ ಪಟ್ಟಣ ಠಾಣೆ ಪೊಲೀಸರಿಗೆ ಮಂಗಳವಾರ ದೂರು ನೀಡಲಾಗಿದೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿ. ಬಿ. ಸೂರ್ಯಕುಮಾರ್ ನೇತೃತ್ವದ ತಂಡ ಪಟ್ಟಣ ಠಾಣೆಗೆ ತೆರಳಿ ಸಹಾಯಕ ಇನ್ಸ್‌ಪೆಕ್ಟರ್ ಅವರಿಗೆ ದೂರು ನೀಡಿ ಪ್ರಕರಣ ದಾಖಲು ಮಾಡಿದರು. ನಗರ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಗುತ್ತಿಗೆದಾರರು ಹಾಗೂ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ, ಸಾರ್ವಜನಿಕರು ಸಂಘ-ಸಂಸ್ಥೆಗಳಿಂದ ಮತ್ತು ತಮ್ಮ ಸ್ವಂತ ಖರ್ಚಿನಿಂದ ನಗರದ ಜನಸೇವೆ ಮತ್ತು ಪ್ರಾಣಿ ಪಕ್ಷಿಗಳ ಉಪಯೋಗಕ್ಕಾಗಿ ಸಾಲುಮರದ ವೆಂಕಟೇಶ್ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡಿತ್ತಿದ್ದಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಬೇರುಗಳಿಗೆ ಜೆಸಿಬಿ ಬಿಟ್ಟು ಹಾಳು ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಗುತ್ತಿಗೆದಾರರ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದು ಮರ ಬೇರು ಸಮೇತ ನೆಲಕ್ಕೆ ಬಿದ್ದಿದೆ. ಬಿ. ರಾಚಯ್ಯ ಜೋಡಿ ರಸ್ತೆ ಎರಡು ಬದಿಯಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ, ಸಾರ್ವಜನಿಕರು, ಪ್ರಾಣಿ, ಪಕ್ಷಿಗಳಿಗೆ ನೆರಳು ಮತ್ತು ಉತ್ತಮ ಗಾಳಿ ದೊರೆಯುವಂತೆ ವೆಂಕಟೇಶ್ ಮಾಡಿದ್ದರು. ಆದರೆ, ಇದ್ಯಾವುದನ್ನು ಲೆಕ್ಕಿಸದೇ ನಗರಸಭೆ ಅಧಿಕಾರಿಗಳು ಹಾಗು ಗುತ್ತಿಗೆದಾರರ ಜೆಸಿಬಿ ಮೂಲಕ ಅಗೆಯುವ ಮೂಲಕ ಮರಗಳಿಗೆ ಹಾನಿ ಮಾಡಿದ್ದಾರೆ. ಇವರ ವಿರುದ್ದ ಕ್ರಮ ಕೈಗೊಂಡು, ಇನ್ನುಳಿದ ಗಿಡಗಳಿಗೆ ಹಾನಿಯಾಗದಂತೆ ಕ್ರಮ ವಹಿಸಬೇಕು ಕೂಡಲೇ ಮಣ್ಣು ಹಾಕಿಸಿ, ನೀರು ಹಾಯಿಸಿ, ಗಿಡಗಳ ಪೋಷಣೆಗೆ ಮುಂದಾಗಬೇಕು ಎಂದು ಮನವಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಸೋಮವಾರಪೇಟೆ ಗುರು, ಮಹೇಶ್, ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ನಾಯಕ್, ಗ್ರಾಮಾಂತರ ಮಂಡಲ ಅಧ್ಯಕ್ಷ ಹರದನಹಳ್ಳಿ ಪ್ರದೀಪ್ ಇದ್ದರು.