ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ದ್ವೇಷ ಭಾಷಣ ವಿಧೇಯಕವನ್ನು ರದ್ದುಪಡಿಸುವಂತೆ ಆಗ್ರಹಿಸಿ ಹನೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಶಿರಸ್ತೇದಾರ್ ನಾಗೇಂದ್ರ ಅವರಲ್ಲಿ ಮನವಿ ಸಲ್ಲಿಸಿದರು. ವೃಷಭೇಂದ್ರಸ್ವಾಮಿ, ಮೂರ್ತಿ, ಪುಟ್ಟರಾಜು, ಗುರುಪಾದಸ್ವಾಮಿ ಇತರರಿದ್ದರು.  
ಚಾಮರಾಜನಗರ

ದ್ವೇಷ ಭಾಷಣ ವಿಧೇಯಕ ರದ್ದತಿಗೆ ಆಗ್ರಹ

ಎ. ಆರ್. ರಘುರಾಮ
ಹನೂರು : ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ದ್ವೇಷ ಭಾಷಣ ವಿಧೇಯಕವನ್ನು ರದ್ದುಪಡಿಸುವಂತೆ ಆಗ್ರಹಿಸಿ ಮಂಗಳವಾರ ಹನೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ನೆರೆದಿದ್ದ ಬಿಜೆಪಿ ಮಂಡಲದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹನೂರು ಮಂಡಲ ಬಿಜೆಪಿ ಅಧ್ಯಕ್ಷ ಕೆ.ಪಿ ವೃಷಭೆಂದ್ರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ತಮ್ಮ ಹಗರಣವನ್ನು ಮುಚ್ಚಿಕೊಳ್ಳಲು ಹಾಗೂ ಒಂದು ಸಮುದಾಯದ ಓಲೈಕೆಗಾಗಿ ದ್ವೇಷ ಭಾಷಣ ವಿಧೇಯಕ 2025 ಅನ್ನು ಜಾರಿಗೊಳಿಸಲು ಮುಂದಾಗಿದೆ. ಮಸೂದೆಯನ್ನು ಮಂಡಿಸಿದೆ. ಇದು ಜಾರಿಯಾದರೆ ನಾಗರಿಕರ ಹಕ್ಕುಗಳನ್ನು ಕಸಿದು ಕೊಂಡಾಂತಾಗುತ್ತದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ರಾಜ್ಯಪಾಲರು ಈ ಬಗ್ಗೆ ಮನಗಂಡು ವಿಧೇಯಕವನ್ನು ರದ್ದು ಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಳಿಕ ಕಾರ್ಯಕರ್ತರು ಮನವಿಯನ್ನು ಶಿರಸ್ತೇದಾರ್ ನಾಗೇಂದ್ರ ಅವರ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು. ಜಿಲ್ಲಾಧಿಕಾರಿ ಅವರು ಮೂಲಕ ಮನವಿಯನ್ನು ರಾಜ್ಯಪಾಲರಿಗೆ ಕಳುಹಿಸುವುದಾಗಿ ನಾಗೇಂದ್ರ ತಿಳಿಸಿದರು.
ಈ ಸಂದರ್ಭ ಮಂಡಲದ ಪ್ರಧಾನ ಕಾರ್ಯದರ್ಶಿ ಮೂರ್ತಿ, ಕಾರ್ಯದರ್ಶಿಗಳಾದ ಮಹದೇವಸ್ವಾಮಿ, ನಾಗಯ್ಯ, ಹಲಗಪ್ಪ, ಉಪಾಧ್ಯಕ್ಷರಾದ ಪರಶಿವಮೂರ್ತಿ, ಮಲ್ಲುಸ್ವಾಮಿ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ರೈತ ಮೋರ್ಚಾ ಅಧ್ಯಕ್ಷ ಗುರುಪಾದಸ್ವಾಮಿ, ಮುಖಂಡರಾದ ಮಹದೇವಪ್ಪ,
ಶ್ರೀನಿವಾಸಚಾರಿ, ನಾಗರಾಜನಾಯಕ, ಮುದ್ದುಗಾಮಶೆಟ್ಟಿ ಹಾಗೂ ಇನ್ನಿತರರು ಇದ್ದರು.