ಗುಂಡ್ಲುಪೇಟೆ ತಾಲೂಕಿನ ಕಗ್ಗಳ ಸಮೀಪ ಬೈಕ್‌ಗೆ ಡಿಕ್ಕಿಹೊಡೆದ ಕಾರು. 
ಚಾಮರಾಜನಗರ

ಕಾರು ಡಿಕ್ಕಿ, ಬೈಕ್ ಸವಾರರಿಗೆ ತೀವ್ರ ಗಾಯ

ಗುಂಡ್ಲುಪೇಟೆ: ತಾಲೂಕಿನ ಕಗ್ಗಳ ಸಮೀಪ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರ ತಲೆಗೆ ತೀವ್ರ ಪೆಟ್ಟಾಗಿದೆ.
ಶಿಕ್ಷಕ ಹಂಗಳ ಗ್ರಾಮದ ಶಿವಕುಮಾರ್ (26) ಹಾಗೂ ಬೆಳವಾಡಿ ಗ್ರಾಮದ ರಮೇಶ್ ಚಾಮರಾಜನಗರದಿಂದ ಬೈಕ್‌ನಲ್ಲಿ ಗುಂಡ್ಲುಪೇಟೆಯತ್ತ ಹೋಗುತ್ತಿದ್ದಾಗ ಕಗ್ಗಳ ಗ್ರಾಮದಲ್ಲಿ ಎದುರಿಗೆ ಬರುತ್ತಿದ್ದ ಕಾರು ಡಿಕ್ಕಿಹೊಡೆದಿದೆ.
ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ತೀವ್ರವಾಗಿ ಗಾಯಗೊಂಡರು. ಕೂಡಲೇ ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಪೊಲೀಸರು ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳುಹಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.