Bike stolen at Chikkalur fair 
ಚಾಮರಾಜನಗರ

ಚಿಕ್ಕಲ್ಲೂರು ಜಾತ್ರೆಯಲ್ಲಿ ಬೈಕ್ ಕಳವು

ಕೊಳ್ಳೇಗಾಲ: ಚಿಕ್ಕಲ್ಲೂರು ಜಾತ್ರೆಯಲ್ಲಿ ಬೈಕ್ ವೊಂದು ಕಳ್ಳವಾಗಿರುವ ಸಂಬಂಧ ಭಾನುವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರ ರಾಮಸಮುದ್ರದ ದುರ್ಗಿ ಗುಡಿ ಬೀದಿಯ ನಿವಾಸಿ ಪ್ರವೀಣ್ ಅವರೇ ಬೈಕ್ ಕಳೆದುಕೊಂಡವರು. ಇವರ ಬೈಕ್ ಅನ್ನು ಸಹೋದರ ಪ್ರದೀಪ್  ಜ.3 ರಂದು ಚಿಕ್ಕಲ್ಲೂರು ಜಾತ್ರೆಗೆ ಕೊಂಡೊಯ್ದಿದ್ದು ಹೊಸಮಠ ಹಿಂಭಾಗ ಪಾಕಿರ್ಂಗ್ ಮಾಡಿ ಪೂಜೆ ಗೆಂದು ತೆರಳಿದ್ದರು. ಪೂಜೆ ಮುಗಿಸಿ ವಾಪಸ್ ಬಂದು ನೋಡಿದಾಗ ಬೈಕ್ ಕಾಣಿಸಿಲ್ಲ. ಬಳಿಕ, ಎಲ್ಲ ಕಡೆ ಯೂ ಹುಡುಕಾಡಿದರು ಬೈಕ್ ಸಿಗದ ಕಾರಣ ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ವಹಿಸಿದ್ದಾರೆ.