ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯ ಶ್ರೀಶಿವಕುಮಾರ ಸ್ವಾಮಿ ವೃತ್ತದಲ್ಲಿ ಹೋಬಳಿಯ ವ್ಯಾಪ್ತಿಯ ಪ್ರಚಾರಕ್ಕೆ ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಂಗಳವಾರ ಚಾಲನೆ ನೀಡಿದರು. ಮೂಡ್ಲುಪುರ ನಂದೀಶ್, ಎನ್‌ರಿಎಚ್ ಮಹದೇವಸ್ವಾಮಿ, ದೊಡ್ಡರಾಯಪೆಟೆ ಗಿರೀಶ್, ಕಾವುದವಾಡಿ ಗುರು, ಸುಧಾಮಲ್ಲಣ್ಣ, ಕೆ.ವೀರಭದ್ರಸ್ವಾಮಿ, ನಂದೀಶ್, ಆಲೂರು ಪ್ರದೀಪ್, ಕೆಂಪನಪುರ ಶಿವಶಂಕರ್ ಇತರರು ಹಾಜರಿದ್ದರು. 
ಚಾಮರಾಜನಗರ

ಮೇ 22ರ ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಮೇ 22ರಂದು ಆಯೋಜಿಸಿರುವ ಜಿಲ್ಲಾಮಟ್ಟದ ಬಸವ ಜಯಂತ್ಯುತ್ಸವ
  • ಸಂತೇಮರಹಳ್ಳಿಯ ಶ್ರೀಶಿವಕುಮಾರ ಸ್ವಾಮಿ ವೃತ್ತದಲ್ಲಿ ಹೋಬಳಿಯ ವ್ಯಾಪ್ತಿಯ ಪ್ರಚಾರಕ್ಕೆ ಮಂಗಳವಾರ ಚಾಲನೆ
ಚಾಮರಾಜನಗರ: ನಗರದಲ್ಲಿ ಮೇ 22ರಂದು ಆಯೋಜಿಸಿರುವ ಜಿಲ್ಲಾಮಟ್ಟದ ಬಸವ ಜಯಂತ್ಯುತ್ಸವ ಮೇ 22ರಂದು ನಡೆಯಲಿದ್ದು, ಎಲ್ಲ ಹಳ್ಳಿಗಳಿಂದ ಬಸವಣ್ಣ ಅವರ ಅನುಯಾಯಿಗಳು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೇಂದು ಬಸವ ಬಳಗದ ಒಕ್ಕೂಟದ ಅಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮನವಿ ಮಾಡಿದರು.
ತಾಲೂಕಿನ ಸಂತೇಮರಹಳ್ಳಿಯ ಶ್ರೀಶಿವಕುಮಾರ ಸ್ವಾಮಿ ವೃತ್ತದಲ್ಲಿ ಹೋಬಳಿಯ ವ್ಯಾಪ್ತಿಯ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಚಾ.ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಬಸವ ಬಳಗಗಳ ಒಕ್ಕೂಟದ ವತಿಯಿಂದ ಮೇ 22 ರಂದು ನಡೆಯಲಿರುವ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ-2026 ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದರು ತಿಳಿಸಿದರು.
ಒಕ್ಕೂಟದ ಪದಾಧಿಕಾರಿಗಳು ಎಲ್ಲ ಗ್ರಾಮಗಳಿಗೂ ಖುದ್ಧಾಗಿ ಭೇಟಿ ನೀಡಿ, ಆಹ್ವಾನಿಸಲಾಗುತ್ತಿದೆ. ಒಂದು ವಾರಗಳ ಕಾಲ ಐದು ತಾಲೂಕುಗಳಲ್ಲಿ ಪ್ರಚಾರ ನಡೆಸಲಾಗುತ್ತದೆ. ಹೀಗಾಗಿ ಮುಖಂಡರು ಸಕ್ರಿಯವಾಗಿ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಎನ್‌ರಿಎಚ್ ಮಹದೇವಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ಎಲ್ಲ ವೀರಶೈವ ಲಿಂಗಾಯತ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಬಳಗಗಳ ಒಕ್ಕೂಟವನ್ನು ರಚನೆ ಮಾಡಿಕೊಂಡು ಜಿಲ್ಲಾ ಕೇಂದ್ರದಲ್ಲಿ ಮೇ 22 ರಂದು ಅದ್ಧೂರಿಯಾಗಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯವಾಗಿದೆ. ಪ್ರತಿ ಮನೆಗೂ ಕರ ಪತ್ರವನ್ನು ತಲಪಿಸುವ ಜೊತೆಗೆ ಅವರನನು ಕಾರ್ಯಕ್ರಮಕ್ಕೆ ಬರುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೊಡ್ಡರಾಯಪೆಟೆ ಗಿರೀಶ್, ಜಿಲ್ಲಾ ನಿರ್ದೇಶಕರಾದ ಕಾವುದವಾಡಿ ಗುರು, ಸುಧಾಮಲ್ಲಣ್ಣ, ಕೆ.ವೀರಭದ್ರಸ್ವಾಮಿ, ನಂದೀಶ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಕೆಂಪನಪುರ ಶಿವಶಂಕರ್, ಡಿ.ಎಸ್. ಶಂಕರಮೂರ್ತಿ, ಹೊನ್ನೂರು ಬಸವಣ್ಣ, ಹೆಗ್ಗೋಠಾರ ವಿಜಯ್, ಆಲ್ದೂರು ರಾಜಶೇಖರ್, ರಮೇಶ್ ಬಾಬು, ಅಲೂರು ಬಾಬು, ವಕೀಲ ಪ್ರಥ್ವಿ, ಶ್ರೀಕಂಠಮೂರ್ತಿ, ಡೇರಿ ಅಧ್ಯಕ್ಷ ಉಮ್ಮತ್ತೂರು ಸಿದ್ದಪ್ಪ, ಮಹೇಶ್ ಇತರರು ಇದ್ದರು.
"

ನಗರದ ಶ್ರೀಸಿದ್ದಮಲ್ಲೇಶ್ವರ ಮಠ, ಬಸವ ಬಳಗದ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೇ 22ರಂದು ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಸುತ್ತೂರುಶ್ರೀಗಳು ಹಾಗು ಜಿಲ್ಲೆಯ ಎಲ್ಲ ಮಠಾಧಿಪತಿಗಳ ನೇತೃತ್ವದಲ್ಲಿ ಜಯಂತ್ಯುತ್ಸವ ನಡೆಯಲಿದ್ದು, ಜಿಲ್ಲೆಯ ಬಸವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿದೆ.

— ಮೂಡ್ಲುಪುರ ನಂದೀಶ್, ಅಧ್ಯಕ್ಷ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಚಾಮರಾಜನಗರ