ಗುಂಡ್ಲುಪೇಟೆ ಪಟ್ಟಣದಲ್ಲಿ ಬಸವಜಯಂತಿ ಆಚರಣೆ ಪೂರ್ವ ಸಿದ್ಧತೆ ಅಂಗವಾಗಿ ಸೋಮೇಶ್ವರ ಹಾಸ್ಟೆಲ್ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರ ಸಭೆಯಲ್ಲಿ ಶಾಸಕ ಎಚ್. ಎಂ. ಗಣೇಶ ಪ್ರಸಾದ್, ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಘಟಕ ಅಧ್ಯಕ್ಷ ಕೆ.ಎಸ್. ಶಿವಪ್ರಸಾದ್ ಇತರರು ಇದ್ದರು.  
ಚಾಮರಾಜನಗರ

ಜೂ. 17 ರಂದು ಬಸವಜಯಂತಿ ಆಚರಣೆಗೆ

ಎ. ಆರ್. ರಘುರಾಮ
ಗುಂಡ್ಲುಪೇಟೆ : ಪಟ್ಟಣದಲ್ಲಿ ಜೂ. 17 ರಂದು ವಿಜೃಂಭಣೆಯಿಂದ ಬಸವಜಯಂತಿ ಆಚರಣೆ
ಮಾಡಲು ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ನಿರ್ಧರಿಸಿದೆ.
ಸೋಮೇಶ್ವರ ಹಾಸ್ಟೆಲ್ನಲ್ಲಿ ಸಭಾದ ತಾಲೂಕು ಅಧ್ಯಕ್ಷ ಕೆ.ಎಸ್. ಶಿವಪ್ರಸಾದ್ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಎಚ್. ಎಂ. ಗಣೇಶ ಪ್ರಸಾದ್, ಸಮಾಜದ ಎಲ್ಲರೂ ಒಟ್ಟಾಗಿ ಆಚರಿಸುವ ಬಸವ ಜಯಂತಿ ಮಾದರಿ ಕಾರ್ಯಕ್ರಮವಾಗಬೇಕು. ಇದಕ್ಕೆ ಅಗತ್ಯ ನೆರವು ನೀಡಲಾಗುತ್ತದೆ ಎಂದರು. ಮಾಜಿ ಶಾಸಕ ಸಿ.ಎಸ್. ನಿರಂಜನಕುಮಾರ್ ಮಾತನಾಡಿ, ಕಳೆದಬಾರಿಯಂತೆ ಈ ಬಾರಿಯೂ ನೆರೆಯ ತಾಲೂಕಿನ ಜನರನ್ನೂ ಆಹ್ವಾನಿಸಿ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಸಬೇಕು ಎಂದರು. ಕಾಡಾ ಮಾಜಿ ಅಧ್ಯಕ್ಷ ನಂಜಪ್ಪ, ಮಹಾಸಭಾ ಮಾಜಿ ಅಧ್ಯಕ್ಷ ಕಮರಹಳ್ಳಿ ರವಿ, ಬಿಜೆಪಿ ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್, ಕಡಬೂರು ಮಂಜುನಾಥಿತರರು ಇದ್ದರು.