ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗೇರಿ ಶಾಂತಿನಗರದ ತೋಟವೊಂದರಲ್ಲಿ ಬೆಳೆದಿದ್ದ ಬಾಳೆಯನ್ನು ಕಾಡಾನೆಗಳು ನಾಶ ಮಾಡಿರುವುದು.
ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗೇರಿ ಶಾಂತಿನಗರದ ತೋಟಕ್ಕೆ ಸೋಮವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ 4 ತಿಂಗಳ ನೂರಕ್ಕು ಹೆಚ್ಚು ಬಾಳೆ ಗಿಡಗಳನ್ನು ನಾಶ ಮಾಡಿವೆ.
ಶಾಂತಿನಗರದ ನಿವಾಸಿ ರವಿ ಅವರು ತೋಟದಲ್ಲಿ ಒಂದೂವರೆ ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಕಾಡಾನೆಗಳು ರಾತ್ರಿ ತೋಟಕ್ಕೆ ಲಗ್ಗೆ ಇಟ್ಟು ನಾಶ ಮಾಡಿವೆ. ಬೇಸಿಗೆ ಸಮಯದಲ್ಲಿ ವ್ಯವಸಾಯ ಮಾಡಲು ನೀರಿಗೂ ಕಷ್ಟವಾಗಿತ್ತು. ಇದರ ನಡುವೆ ಲಕ್ಷಾಂತರ ರೂ. ವ್ಯಯಿಸಿ ಬಾಳೆ ವ್ಯವಸಾಯ ಮಾಡಿದ್ದ ರವಿ ಇದೀಗ ಸಂಕಷ್ಟಕ್ಕೊಳಗಾಗಿದ್ದಾರೆ.