ಬೆಲ್ಲದ ದೋಣಿ ನಾಟಕದ ದೃಶ್ಯ 
ಚಾಮರಾಜನಗರ

ಬಹುರೂಪಿ ಬಾಬಾ ಸಾಹೇಬ್ ರಾಷ್ಟ್ರೀಯ ನಾಟಕೋತ್ಸವಕ್ಕೆ ಬೆಲ್ಲದ ದೋಣಿ ನಾಟಕ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಬೆಲ್ಲದ ದೋಣಿ ನಾಟಕ ಆಯ್ಕೆ
  • ನಾಡಿನಾದ್ಯಂತ ಪ್ರದರ್ಶನ ಕಂಡು ರಂಗಾಸಕ್ತರ ಗಮನ ಸೆಳೆದಿವೆ.
ಚಾಮರಾಜನಗರ : ಮೈಸೂರು ರಂಗಾಯಣ ಜ.11 ರಿಂದ 18ರವರೆಗೆ ನಡೆಸುತ್ತಿರುವ ಬಾಬಾ ಸಾಹೇಬ್ ರಾಷ್ಟ್ರೀಯ ನಾಟಕೋತ್ಸವಕ್ಕೆ ನಗರದ ರಂಗವಾಹಿನಿ ತಂಡದ ಬೆಲ್ಲದ ದೋಣಿ ನಾಟಕ ಆಯ್ಕೆಯಾಗಿದೆ.
ಜ.14 ರಂದು ಸಂಜೆ 7 ಗಂಟೆಗೆ ಮೈಸೂರು ಕಿರುರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಕಳೆದ ನಾಲ್ಕು ದಶಕಗಳಿಂದ ಗಡಿಭಾಗದಲ್ಲಿ ನಾಟಕ, ಜಾನಪದ, ಸಾಹಿತ್ಯ, ಕಲೆ , ಸಂಸ್ಕೃತಿ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿರುವ ರಂಗವಾಹಿನಿ ತಂಡವು ಈಗಾಗಲೇ ಮಾಲತೇಶ್ ಬಡಿಗೇರ (ಮಂಟೇಸ್ವಾಮಿ ಕಥಾಪ್ರಸಂಗ) ಕೆ. ವೆಂಕಟರಾಜ್ (ಪೋಲಿ ಕಿಟ್ಟಿ) ಎಚ್.ಎಸ್. ಉಮೇಶ್ (ಏಕಲವ್ಯ) ಸಿ.ಎಂ. ನರಸಿಂಹಮೂರ್ತಿ (ಅಂಬೇಡ್ಕರ್ ಮತ್ತು ಎಚ್ಚಮ ನಾಯಕ) ರೂಬಿನ್ ಸಂಜಯ್ (ಬೆಲ್ಲದ ದೋಣಿ) ನಿರ್ದೇಶಿಸಿದ ನಾಟಕಗಳು
ನಾಟಕದ ಕುರಿತು..
ನಾಟಕವನ್ನು ಹನೂರು ಚನ್ನಪ್ಪನವರು ರಚಿಸಿದ್ದಾರೆ. ಅಸಮಾನತೆಯ ಸಮಾಜದಲ್ಲಿ ಎಷ್ಟು ಪ್ರಯತ್ನಿಸಿದರೂ ಸಮಾನತೆಯೆಂಬುದು ಮರೀಚಿಕೆಯಾಗಿದೆ ಎಂಬ ಸಂದೇಶವನ್ನು ನಾಟಕ ಸಾರುತ್ತದೆ.
ಬೇರೆ ಬೇರೆ ರಾಜ್ಯದ ನಾಟಕಗಳು ಪ್ರದರ್ಶನ ಕೊಡುತ್ತಿರುವ ಪ್ರತಿಷ್ಠಿತ ಬಹುರೂಪಿಗೆ ಬೆಲ್ಲದ ದೋಣಿ ನಾಟಕ ಆಯ್ಕೆಯಾಗಿರುವುದು ಜಿಲ್ಲೆಯ ರಂಗಾಸಕ್ತರಿಗೆ ಬಹಳ ಸಂತಸ ತಂದಿದೆ.
ಸಿ.ಎಂ ನರಸಿಂಹಮೂರ್ತಿ, ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ, ಚಾಮರಾಜನಗರ