ತೇರಂಬಳ್ಳಿ -ಗೊಬ್ಬಳಿಪುರ ಗ್ರಾಮದ ರಸ್ತೆಯಲ್ಲಿ ಪ್ಯಾಸೆಂಜರ್ ಆಟೋದಲ್ಲಿ ಪಡಿತರ ಸಾಗಿಸುತ್ತಿದ್ದವನನ್ನು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಮಾಲು ಸಮೇತ ವಶಕ್ಕೆ ಪಡೆದಿರುವುದು.  
ಚಾಮರಾಜನಗರ

ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದವನ ಬಂಧನ

ಕೊಳ್ಳೇಗಾಲ: ಪ್ಯಾಸೆಂಜರ್ ಆಟೋದಲ್ಲಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದವನನ್ನು ಸೋಮವಾರ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ತಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ಅಶೋಕ (41) ಬಂಧಿತ ವ್ಯಕ್ತಿ. ಪ್ಯಾಸೆಂಜರ್ ಆಟೋದಲ್ಲಿ ಈತ ಸಾಗಿಸುತ್ತಿದ್ದ 512 ಕೆಜಿ ಪಡಿತರವನ್ನು ತಾಲೂಕಿನ ತೇರಂಬಳ್ಳಿ-ಗೊಬ್ಬಳಿಪುರ ಗ್ರಾಮದ ರಸ್ತೆಯಲ್ಲಿ ಜಪ್ತಿ ಮಾಡಲಾಗಿದೆ.
ಬಡವರಿಗೆ ಸರ್ಕಾರ ನೀಡುವ ಪಡಿತರವನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ತಿ.ನರಸೀಪುರ ಕಡೆಗೆ ಸಾಗಿಸುತ್ತಿರುವ ಕುರಿತು ಮಾಹಿತಿ ತಿಳಿದ ಅಗರ-ಮಾಂಬಳ್ಳಿ ಪೊಲೀಸರು ಮತ್ತು ಆಹಾರ ಇಲಾಖೆ ಅಧಕಾರಿಗಳು ತೇರಂಬಳ್ಳಿ-ಗೊಬ್ಬಳಿಪುರ ರಸ್ತೆಯಲ್ಲಿ ಮಾಲು ಸಮೇತ ಬಂಧಿಸಲಾಗಿದೆ.
ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಆಹಾರ ನಿರೀಕ್ಷಕ ಎನ್.ಎಂ ಪ್ರಸಾದ್, ಅಗರ ಮಾಂಬಳ್ಳಿ ಠಾಣೆ ಎಸ್‌ಐ ಕರಿಬಸಪ್ಪ, ಎಚ್.ಸಿ ಪರಶಿವಮೂರ್ತಿ, ಕಾನ್‌ಸ್ಟೆಬಲ್ ಶಿವಕುಮಾರ್, ಉಸ್ಮಾನ್ ಇದ್ದರು.