ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಡಾ.ಜಿ.ಪರಮೇಶ್ವರ ಅವರು ಬುಧವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಸಚಿವ ಸಿ. ಪುಟ್ಟರಂಗಶೆಟ್ಟಿ, ಶಾಸಕರಾದ ಗಣೇಶ್‌ಪ್ರಸಾದ್, ದರ್ಶನ್ ಧ್ರುವನಾರಾಯಣ ಇದ್ದರು. 
ಚಾಮರಾಜನಗರ

ಯರಿಯೂರು ಸಮಗ್ರ ಅಭಿವೃದ್ಧಿಗೆ ಮನವಿ

ಪ್ರಮುಖ ಮುಖ್ಯಾಂಶಗಳು

  • ಕಂದಾಯ ಸಚಿವರಿಗೆ ಗ್ರಾಮದ ಮುಖಂಡರ ಕೋರಿಕೆ
ಯಳಂದೂರು: ಯರಿಯೂರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಡಾ.ಜಿ. ಪರಮೇಶ್ವರ ಅವರಿಗೆ ಗ್ರಾಮದ ಮುಖಂಡರು ಬುಧವಾರ ಮನವಿ ಸಲ್ಲಿಸಿದರು.
ಬರ ವೀಕ್ಷಣೆಗೆ ಆಗಮಿಸಿದ್ದ ಅವರನ್ನು ಗ್ರಾಮದ ಮುಖಂಡರು ಪಟಾಕಿ ಸಿಡಿಸಿ, ಮಂಗಳವಾದ್ಯಗಳ ಮೂಲಕ ಗ್ರಾಮಕ್ಕೆ ಆಹ್ವಾನಿಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪರಮೇಶ್ವರ ಅವರು ಪುಷ್ಪಾರ್ಚನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಗ್ರಾಮದಲ್ಲಿ 70 ವರ್ಷದಿಂದಲೂ ಇಲ್ಲಿ ನಿವೇಶನಗಳು ಹಂಚಿಕೆಯಾಗಿಲ್ಲ. ಇಲ್ಲಿ ಮೂಲ ಸಮಸ್ಯೆಗಳು ಅಧಿಕವಾಗಿವೆ. ಹಾಗಾಗಿ ಇಲ್ಲಿ ನಿವೇಶನಗಳನ್ನು ನೀಡಲು ಕ್ರಮ ವಹಿಸಬೇಕು. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಇದಕ್ಕೆ ಹಣವನ್ನು ಮಂಜೂರು ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವ ಭರವಸೆಯನ್ನು ಡಿಸಿಎಂ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಗಣೇಶ್‌ಪ್ರಸಾದ್, ದರ್ಶನ್ ಧ್ರುವನಾರಾಯಣ, ಯಜಮಾನರಾದ ಶ್ರೀನಿವಾಸ್ ರಂಗಸ್ವಾಮಿ, ಮಹದೇವಸ್ವಾಮಿ, ಚೆನ್ನಂಕಯ್ಯ, ಮುಖಂಡರಾದ ಚಿನ್ನಸ್ವಾಮಿ, ಚಿಕ್ಕಮಾದಯ್ಯ, ನಾರಾಯಣ್, ಕುಮಾರ್, ಕೃಷ್ಣ ಇತರರು ಇದ್ದರು.