ಶ್ರೀ ಹುಚ್ಚಾಲಮ್ಮ ದೇವಾಲಯದಲ್ಲಿ ಮಂಗಳವಾರ 26ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಭಕ್ತರು ದೇವಿಯ ದರ್ಶನ ಪಡೆದರು.
ಕೊಳ್ಳೇಗಾಲ: ಪಟ್ಟಣದ ಬೆಂಗಳೂರು ಮುಖ್ಯ ರಸ್ತೆಯ ಲ್ಲಿರುವ ಶ್ರೀ ಹುಚ್ಚಾಲಮ್ಮ ದೇವಾಲಯದಲ್ಲಿ ಮಂಗಳವಾರ 26ನೇ ವರ್ಷದ ವಾರ್ಷಿ ಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕೈಕರ್ಯ ನೆರವೇರಿತು.
ದೇವಸ್ಥಾನದಲ್ಲಿ ದೇವಿಗೆ ಮುಂಜಾನೆಯಿಂದಲೇ ಪುಣ್ಯಾಹ, ದೇವರ ಸಂಕಲ್ಪ, ಪಂಚಾಮೃತ ಅಭಿಷೇಕ್, ನವಗ್ರಹ ಅಭಿಷೇಕ, ವಿಶೇಷ ಅಲಂಕಾರ ನಡೆಸಿ ಮಹಾಮಂಗಳಾರತಿ ನಡೆಯಿತು. ನಂತರ ಭಕ್ತರು ಹಣ್ಣು, ಕಾಯಿ ಸಮರ್ಪಿಸಿದರು. ಇಂದಿನ ಎಲ್ಲ ಪೂಜಾ ಕೈಂಕರ್ಯವನ್ನು ಅರ್ಚಕರಾದ ಪ್ರಭುಸ್ವಾಮಿ, ಮಧುಸೂದನ್ ನಡೆಸಿಕೊಟ್ಟರು.