ಕೊಳ್ಳೇಗಾಲದಲ್ಲಿ ಶನಿವಾರ ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಭೀಮನಗರ ಕುಲಸ್ಥರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘ ಪದಾಧಿಕಾರಿಗಳು ಮೊಂಬತ್ತಿ ಮೆರವಣಿಗೆ ನಡೆಸಿದರು.
ಕೊಳ್ಳೇಗಾಲ: ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಶನಿವಾರ ಪಟ್ಟಣದಲ್ಲಿ ಭೀಮನಗರ ಕುಲಸ್ಥರು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ವತಿಯಿಂದ ಮೊಂಬತ್ತಿ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಭೀಮನಗರದ ದಿಡ್ಡದ ಕೇರಿ ಬಡಾವಣೆಯ ಚೌಡಮ್ಮ ಗುಡಿ ಮುಂಭಾಗದಿಂದ ಮೊಂಬತ್ತಿ ಹಿಡಿದು ಹೊರಟ ನಿವಾಸಿಗಳು ಸಾಮಂದಿಗೇರಿ ಬೀದಿ, ಕನ್ನಿಕಾಪರಮೇಶ್ವರಿ ರಸ್ತೆ, ಮಸೀದಿ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಸಾಗಿದರು.
ಮೆರವಣಿಗೆ ಉದ್ದಕ್ಕೂ ಬುದ್ಧಂ ಶರಣಂ ಗಚ್ಛಾಮಿ ಹಾಗೂ ಅಂಬೇಡ್ಕರ್ ಗೀತೆಗಳನ್ನು ಹಾಡಲಾಯಿತು. ಕೊನೆಗೆ ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಪದಾಧಿಕಾರಿಗಳು, ಭೀಮನಗರ ಯಜಮಾನರು ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಮೊಂಬತ್ತಿಗಳನ್ನು ಅಂಬೇಡ್ಕರ್ ಅವರ ಪ್ರತಿಮೆ ಮುಂಬಾಗ ಹಚ್ಚಿ ಗೌರವ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಎಸ್.ಆನಂದಮೂರ್ತಿ, ಕಾರ್ಯದರ್ಶಿ ಪಾಪಣ್ಣ, ಉಪಾಧ್ಯಕ್ಷ ಕಿರಣ್, ಖಂ ಜಾಚಿ ರಾಜೇಶ್, ಸಹ ಕಾರ್ಯದರ್ಶಿ ಶಶಿಧರ್, ವಕೀಲ ಮೋಹನ್‌ಕುಮಾರ್, ಮುಳ್ಳೂರು ಮಂಜು, ಭೀಮನಗರ ದೊಡ್ಡ ಯಜಮಾನ ಚಿಕ್ಕಮಾಳಿಗೆ, ಯಜಮಾನರಾದ ವರದರಾಜು, ಸಿದ್ದರಾಜು, ನಟರಾಜು, ಮಹದೇವಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷರಾದ ರೇಖಾ, ರಮೇಶ್, ಮುಖಂಡರಾದ ಶ್ರೀಧರ್, ಎಸ್.ಸಿದ್ದಪ್ಪಾಜಿ, ದಿಲೀಪ್, ಹರೀಶ್ ತೇಜು, ಜಗದೀಶ್ ಮತ್ತಿತರರಿದ್ದರು.