ಚಾಮರಾಜನಗರದ ತಾಲೂಕಿನ ಚಿಕ್ಕಹೊಳೆ ಗ್ರಾಮದಲ್ಲಿ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜೇಂದ್ರ, ಮಹದೇವಯ್ಯ, ಬಸವರಾಜು, ಕೆಂಚಯ್ಯ, ಡಾ.ಕುಮಾರ್ ಚಿಕ್ಕಹೊಳೆ, ಕುಮಾರ್, ಮಂಜು, ನಾಗೇಂದ್ರ ಇತರರಿದ್ದರು. 
ಚಾಮರಾಜನಗರ

ಮಹಿಳೆಯರ ಏಳಿಗೆಗೆ ಅಂಬೇಡ್ಕರ್ ಕಾರಣ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಸ್ನೇಹಾರಾಜ್ ಅಭಿಮತ
  • ಚಿಕ್ಕಹೊಳೆ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಏಳಿಗೆ ಸಾಧಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರಣರಾಗಿದ್ದಾರೆ ಎಂದು ಚಾಮರಾಜನಗರ ವಿಭಾಗದ ಡಿವೈಎಸ್ಪಿ ಸ್ನೇಹಾರಾಜ್ ಹೇಳಿದರು.
ತಾಲೂಕಿನ ಚಿಕ್ಕಹೊಳೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ನಮ್ಮ ದೇಶದ ಮಹಿಳೆಯರಿಗೆ ಹಕ್ಕು ಮತ್ತು ಅಧಿಕಾರ ದೊರೆಯುವಂತಾಯಿತು. ಮಹಿಳೆಯರು ಶಿಕ್ಷಣ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ ಎಂಬುದಕ್ಕೆ ಅಂಬೇಡ್ಕರ್ ಅವರೇ ಕಾರಣರಾಗಿದ್ದಾರೆ ಎಂದು ಬಣ್ಣಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಧ್ಯೇಯ ವಾಕ್ಯಗಳನ್ನು ನಾವೆಲ್ಲರೂ ಪಾಲಿಸಬೇಕು. ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪಾಲಕರು ಶ್ರಮ ವಹಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಯಜಮಾನರಾದ ರಾಜೇಂದ್ರ, ಮಹದೇವಯ್ಯ, ಬಸವರಾಜು, ಕೆಂಚಯ್ಯ, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಗೌರವಾಧ್ಯಕ್ಷ ಡಾ.ಕುಮಾರ್ ಚಿಕ್ಕಹೊಳೆ, ಗೌರವ ಕಾರ್ಯದರ್ಶಿ ಕುಮಾರ್, ಅಧ್ಯಕ್ಷ ಮಂಜು, ಕಾರ್ಯದರ್ಶಿ ನಾಗೇಂದ್ರ, ಸದಸ್ಯರಾದ ಪ್ರಶಾಂತ್, ಮಹೇಶ್, ಸುಧೀಂದ್ರ, ಪ್ರವೀಣ್, ರವಿಕುಮಾರ್ ಇತರರಿದ್ದರು.