ಕೊಳ್ಳೇಗಾಲದ ಆರ್.ಎಂ.ಸಿ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿಬ್ಬಾಣ ದಿನವನ್ನು ಆಚರಿಸಿ ಘಟಕದ ವ್ಯವಸ್ಥಾಪಕ ಬೋಗ ನಾಯಕ ಮಾತನಾಡಿದರು. ಉಮೇಶ್, ಹಿತೇಶ್, ಪರಮೇಶ್ವರ್, ರವಿ, ಚಂದ್ರಶೇಖರ ಇದ್ದರು.
ಕೊಳ್ಳೇಗಾಲ: ಪಟ್ಟಣದ ಆರ್.ಎಂ.ಸಿ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ವರ್ಷದ ಪರಿನಿಬ್ಬಾಣ ದಿನವನ್ನು ಶನಿವಾರ ಆಚರಿಸಲಾಯಿತು.
ಈ ವೇಳೆ ಬಸ್ ಘಟಕದ ನೌಕರರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಎರಡು ನಿಮಿಷ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.
ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಭೋಗ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಘಟಕದ ಕಾರ್ಯಧೀಕ್ಷಕ ಉಮೇಶ್, ಸಂಚಾರಿ ನಿರೀಕ್ಷಕ ಹಿತೇಶ್, ಪಾರುಪತ್ತೇದಾರ ಪರಮೇಶ್ವರ್, ಲೆಕ್ಕ ಪತ್ರ ಶಾಖೆಯ ರವಿ, ಚಂದ್ರಶೇಖರ, ಗಂಗರಾಜು, ರಂಗಸ್ವಾಮಿ, ಸೋಮು, ಸಂಪತ್, ಪರಮೇಶ್ವರ್, ಲೋಕೇಶ್, ನಿರಂಜನ್, ರಾಚಪ್ಪ, ಸೌಮ್ಯ, ವಾಣಿ, ಚಾಲಕರು, ನಿರ್ವಾಹಕರು, ಭದ್ರತಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಸಂಚಾರಿ ಶಾಖೆಯ ಸಿಬ್ಬಂದಿ ಇದ್ದರು.