ಮೈಸೂರಿನ ಟೆರೇಷಿಯನ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಆಲ್ ಇಂಡಿಯಾ ಲೆವೆಲ್ ಕರಾಟೆ ಚಾಂಪಿಯನಿಶಿಪ್-2026 ರಲ್ಲಿ ಬಹುಮಾನ ಪಡೆದ ಕೊಳ್ಳೇಗಾಲ ಮಾಸ್ಟರ್ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳು. 
ಚಾಮರಾಜನಗರ

ಮಾಸ್ಟರ್ ಕರಾಟೆ ಅಕಾಡೆಮಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕೊಳ್ಳೇಗಾಲ: ಮೈಸೂರಿನ ಟೆರೇಷಿಯನ್ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಲ್ ಇಂಡಿಯಾ ಲೆವೆಲ್ ಕರಾಟೆ ಚಾಂಪಿಯನ್ ಶಿಪ್-2026 ರಲ್ಲಿ ಕೊಳ್ಳೇಗಾಲ ಮಾಸ್ಟರ್ ಕರಾಟೆ ಅಕಾಡೆಮಿಯ 21 ವಿದ್ಯಾರ್ಥಿಗಳು 33 ಬಹುಮಾನ ಪಡೆದಿದ್ದಾರೆ.
ಭೃಥ್ವ ಕಣ್ವ ಕಥಾ ವಿಭಾಗದಲ್ಲಿ ಪ್ರಥಮ, ಕುಮಿತೆ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಧನಿಶ್ ಕಥಾ ಪ್ರಥಮ, ಕುಮಿತೆ ದ್ವೀತಿಯ, ಕರಣ್ ಕಥಾ ಪ್ರಥಮ, ಕುಮಿತೆ ದ್ವಿತೀಯ, ನವನೀತ್ ಕಥಾ ಪ್ರಥಮ, ಕುಮಿತೆ ದ್ವಿತೀಯ, ಲಿಖಿತ್ ಜೋಗಿ ಕಥಾ ಪ್ರಥಮ ಕುಮಿತೆ ತೃತೀಯ, ಧ್ರುವನ್ ರಾಜ್ ಕಥಾ ಪ್ರಥಮ, ಕುಮಿತೆ ದ್ವೀತಿಯ, ಭೂಮಿಕಾ ಕಥಾ ಪ್ರಥಮ ಕುಮಿತೆ ತೃತೀಯ, ರವೀನ ಕಥಾ ದ್ವಿತೀಯ, ಕುಮಿತೆ ತೃತೀಯ, ಸಮೃದ್ಧ ಕಥಾ ಮತ್ತು ಕುಮಿತೆ ದ್ವಿತೀಯ, ಆಲಿಯ ಕಥಾ ಮತ್ತು ಕುಮಿತೆ ತೃತೀಯ.
ಹೇಮಲ್ ಕಥಾ ದ್ವಿತೀಯ, ಕುಮಿತೆ ತೃತೀಯ, ತನವ್ ಗೌಡ ಕಥಾ ಮತ್ತು ಕುಮಿತೆ ತೃತೀಯ, ಮಾನ್ಯ ಕಥಾ ಪ್ರಥಮ, ಪರಶುರಾಮ್ ಕಥಾ ಪ್ರಥಮ, ಅದ್ವಿಕ್ ಕಥಾ ಪ್ರಥಮ, ದನ್ವಿನ್ ಕಥಾ ಪ್ರಥಮ,  ಪ್ರಣಮ್ಯ ಕಥಾ ದ್ವಿತೀಯ, ಚಿರಂಜೀವಿ ಕಥಾ ತೃತಿಯ, ಕೀರ್ತನಾ ಕಥಾ ತೃತೀಯ, ಪ್ರೆಸ್ಟನ್ ಕಥಾ ದ್ವಿತೀಯ, ಸ್ಟೀವನ್ ಕಥಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತ ಮಕ್ಕಳಿಗೆ  ಆಯೋಜಕ ಹಾಗೂ ಹಿರಿಯ ಕರಾಟೆ ತೀರ್ಪುಗಾರ ಸೆನ್ಸಾಯಿ ಸುಧಾಕರ್, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಪ್ರಮಾಣ ಪತ್ರ ಮತ್ತು ಟ್ರೋಫಿ ವಿತರಣೆ ಮಾಡಿದ್ದಾರೆ.
ಕೊಳ್ಳೇಗಾಲ ಮಾಸ್ಟರ್ ಕರಾಟೆ ಅಕಾಡೆಮಿ ಶಿಕ್ಷಕ ನಂಜುಂಡಸ್ವಾಮಿ, ತರಬೇತುದಾರ ಪ್ರತ್ಯೂಷ್, ದೀಕ್ಷಿತ್ ಇದ್ದರು.