ಚಾಮರಾಜನಗರದ ನಗರದ ಜೈಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ಇತ್ತೀಚೆಗೆ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ನಡೆಯಿತು. ಸುರೇಶ್ ಋಗ್ವೇದಿ, ಸುಧೀಂದ್ರ ಇತರರು ಹಾಜರಿದ್ದರು.
- ಜೈಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ಶಂಕರ ಜಯಂತಿ
- ಶಂಕರಾಚಾರ್ಯರು ತತ್ವ ಸಿದ್ಧಾಂತಗಳ ಅನುಸರಣೆ
ಚಾಮರಾಜನಗರ: ಆದಿ ಶಂಕರಾಚಾರ್ಯರು ಸಾಂಸ್ಕೃತಿಕ ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡಿ ಭದ್ರ ಬುನಾದಿ ಹಾಕಿ ಭಾರತೀಯ ಸನಾತನ ಧರ್ಮವನ್ನು ರಕ್ಷಿಸಿದವರು ಎಂದು ಶಂಕರ ಅಭಿಯಾನಂ ಕರ್ನಾಟಕದ ಪ್ರಧಾನ ಸುರೇಶ್ ಋಗ್ವೇದಿ ತಿಳಿಸಿದರು.
ನಗರದ ಜೈಹಿಂದ್ ಕಟ್ಟೆಯ ಋಗ್ವೇದಿ ಕುಟೀರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಪಂಚಕ್ಕೆ ಅತ್ಯಂತ ಅಗತ್ಯವಾದ ಅದ್ವೈತ ಸಿದ್ದಾಂತವನ್ನು ನೀಡಿ ಮಾನವ ಎಲ್ಲ ಕ್ಷೇತ್ರದಲ್ಲೂ ಸಮಗ್ರವಾಗಿ ಅಭಿವೃದ್ಧಿ ಸಾಧಿಸುವ ದಿವ್ಯ ಚಿಂತನೆಗಳನ್ನು ನೀಡಿದ ಮಹಾವ್ಯಕ್ತಿ ಶಂಕರಾಚಾರ್ಯರು ಎಂದು ಹೇಳಿದರು.
ಶಂಕರಾಚಾರ್ಯರು ತತ್ವ ಸಿದ್ಧಾಂತಗಳ ಅನುಸರಣೆಯಿಂದ ಮಾನವ ಕಲ್ಯಾಣ ಸಾಧ್ಯವೆಂದು ತಿಳಿಸಿ,ಅದ್ವೈತ ಸಿದ್ದಾಂತದ ಅಹಂ ಬ್ರಹ್ಮಾಸ್ಮಿ ತತ್ವವು ವಿಶ್ವ ವ್ಯಾಪಕತೆಯನ್ನು ಹೊಂದಿದೆ ಎಂದು ತಿಳಿಸಿದರು. ಮೈಸೂರಿನ ಗಾನ ಚಂದ್ರ ಕಲಾಬಳಗ ಅಧ್ಯಕ್ಷ ಸುಧೀಂದ್ರ ಮಾತನಾಡಿ, ಭಾರತದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ ಏಕತೆಯನ್ನು ಮೂಡಿಸಿದ ಆದಿಶಂಕರರ ಜಯಂತಿಯನ್ನು ಭಾರತ ಸರ್ಕಾರ ತತ್ವಜ್ಞಾನಿಗಳ ದಿನ ಎಂದು ಘೋಷಿಸಿರುವುದು ಬಹಳ ಸಂತೋಷವೆಂದು ತಿಳಿಸಿದರು. ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಶರಣ್ಯ, ಶ್ರಾವ್ಯ,ಕಾವ್ಯ ಪೂಜಾ ಲಕ್ಷ್ಮಿ, ಐಶ್ವರ್ಯ ಇದ್ದರು