ಚಾಮರಾಜನಗರದ ಹೊರವಲಯದ ಯಡಬೆಟ್ಟದ ನಳಂದ ಬೌದ್ಧ ವಿಶ್ವ ವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಜನಪರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್ ಉದ್ಘಾಟಿಸಿದರು. ನಳಂದ ಬೌದ್ಧ ವಿಶ್ವ ವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರದ ಭಂತೆ ಬೋಧಿದತ್ತ ಥೇರ, ಬಿಎಸ್ಪಿ ನಾಯಕ ನಾಗಯ್ಯ, ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಜನಪರ ವೇದಿಕೆಯ ಸಂಪನ್ಮೂಲ ವ್ಯಕ್ತಿ ಮಲ್ಕುಂಡಿ ಮಹದೇವಸ್ವಾಮಿ ಇತರರು ಇದ್ದರು. 
ಚಾಮರಾಜನಗರ

ಆಡಿದ ಮಾತಿಗೆ ಬದ್ಧರಾಗುವುದೇ ಬುದ್ಧ ಮಾರ್ಗ

ಪ್ರಮುಖ ಮುಖ್ಯಾಂಶಗಳು

  • ನಳಂದ ಬೌದ್ಧ ವಿಶ್ವ ವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರದ ಭಂತೆ ಬೋಧಿದತ್ತ ಥೇರ ಸಾನಿಧ್ಯ
  • ಜನಪದ ವೇದಿಕೆ 3ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ
ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಕಂಡ ಬುದ್ಧನನ್ನು ನಾವೆಲ್ಲರೂ ಕಾಣಬೇಕಾಗಿದೆ. ಆಡಿದ ಮಾತಿಗೆ ಬದ್ಧರಾಗುವುದೇ ಬುದ್ಧ ಮಾರ್ಗ ಎಂದು ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್ ಹೇಳಿದರು.
ನಗರದ ಹೊರವಲಯದ ಯಡಬೆಟ್ಟದ ನಳಂದ ಬೌದ್ಧ ವಿಶ್ವ ವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಜನಪರ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬಿತ್ತಿನ ಬೀಜ ಲವತ್ತಾದ ಮಣ್ಣಿನಲ್ಲಿ ಮೊಳಕೆಯೊಡೆದರೆ ಅದು ಮಣ್ಣಿನ ಸಹಕಾರವಾಗಿದೆ. ಅದೇ ರೀತಿ ಬಿತ್ತಿದ ವಿಚಾರ ಯಾರ ಎದೆಯಲ್ಲಿ ಲವತ್ತತೆ ಇರುತ್ತದೆಯೋ ಅವರು ಅದನ್ನು ಪಸರಿಸುತ್ತಾರೆ ಎಂದರು. ಜನಪರ ವೇದಿಕೆ ತುಮಕೂರು ಚಂದ್ರಶೇಖರ್ ಮಾತನಾಡಿ, ಜನಪರ ವೇದಿಕೆ ವೈಚಾರಿಕೆ, ಪ್ರಬುದ್ಧತೆಯನ್ನು ಬೆಳೆಸುತ್ತಿದೆ. ಮನೆ ಮನೆಗೆ ಬುದ್ಧ, ಅಂಬೇಡ್ಕರ್ ವಿಷಯಗಳನ್ನು ತಲುಪಿಸುತ್ತಿದೆ. ನಾಡಿನ ಚಿಂತಕರನ್ನು ಕರೆತಂದು ವಿಚಾರಗಳನ್ನು ಮಂಡಿಸುತ್ತಿದೆ. ಬೌಧ ಯಾತ್ರೆ ಕೈಗೊಂಡು ಬುದ್ಧ ಸಂಚರಿಸಿದ ಸ್ಥಳಗಳ ದರ್ಶನ ಮಾಡಲಾಗಿದೆ. ವಿದ್ಯಾರ್ಥಿಗಳು, ಅಂಗವಿಕಲರಿಗೆ ಕಿಟ್‌ಗಳನ್ನು ವಿತರಣೆ ಮಾಡಿದ್ದೇವೆ. ಸಮಾನ ಸುಧಾರಕರ ವಿಚಾರಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಸಮಾಜಕ್ಕೆ ತಲುಪಿಸುತ್ತಿದ್ದೇವೆ ಎಂದು ವಿವರಿಸಿದರು.
ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಳಂದ ಬೌದ್ಧ ವಿಶ್ವ ವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರದ ಭಂತೆ ಬೋಧಿದತ್ತ ಥೇರ ಸಾನಿಧ್ಯವಹಿಸಿದ್ದರು. ಬಿಎಸ್ಪಿ ನಾಯಕ ನಾಗಯ್ಯ, ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ಜನಪರ ವೇದಿಕೆಯ ಸಂಪನ್ಮೂಲ ವ್ಯಕ್ತಿ ಮಲ್ಕುಂಡಿ ಮಹದೇವಸ್ವಾಮಿ, ನಿವೃತ್ತ ಡಿವೈಎಸ್ಪಿ ಗಿರಿಮಲ್ಲ ಕಾಂಬೈ, ಹಿರಿಯ ಉಪನ್ಯಾಸಕ ವಿಜಯ ವರ್ಮ, ದೊಡ್ಡಮನಿ, ಸಮತ ಸೊಸೈಟಿ ಅಧ್ಯಕ್ಷೆ ದೀಪಾ ಬುದ್ಧೆ, ರೂಪಾ ಚಂದ್ರಶೇಖರ್ ಮತ್ತು ಇತರರು ಇದ್ದರು.
ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ:
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ದರ್ಶನ್ ಧ್ರುವನಾರಾಯಣ್ ಅನ್ಯ ಕಾರ್ಯ ನಿಮಿತ್ತ ಮುಂಚಿತವಾಗಿಯೇ ತೆರಳಿದರು. ಇದಕ್ಕೂ ಮುನ್ನ ಯಡಬೆಟ್ಟದ ನಳಂದ ಬೌದ್ಧ ವಿಶ್ವ ವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರವನ್ನು ವೀಕ್ಷಿಸಿದರು.