ಹನೂರಿನಲ್ಲಿ ಜನಗಣತಿ ಸಂಬಂಧ ನೋಡೆಲ್ ಅಧಿಕಾರಿ ಚಂದ್ರಪಾಟೀಲ್ ಅಧಿಕಾರಿಗಳ ಸಭೆ ನಡೆಸಿದರು. ಮಹೇಶ್, ರೇಖಾ, ಚಿನ್ನಪ್ಪಯ್ಯ ಇತರರಿದ್ದರು. 
ಚಾಮರಾಜನಗರ

ಗಣತಿ ಮಾಹಿತಿ ಸಂಗ್ರಹದಲ್ಲಿ ನಿಖರತೆ ಮುಖ್ಯ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಜನಗಣತಿ ಮಾಹಿತಿ ಸಂಗ್ರಹ
  • ನಿಖರತೆ ಕಾಯ್ದುಕೊಳ್ಳುವಂತೆ
ಹನೂರು: ಜನಗಣತಿ ಮಾಹಿತಿ ಸಂಗ್ರಹದಲ್ಲಿ ನಿಖರತೆ ಕಾಯ್ದುಕೊಳ್ಳುವಂತೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಪಾಟೀಲ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಗೆ ಬುಧವಾರ ಆಗಮಿಸಿ ಜನಗಣತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಗಣತಿದಾರರು ಮನೆ ಮನೆಗೆ ತೆರಳಿದಾಗ ಕುಟುಂಬಸ್ಥರಿಂದ ಪರಿಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈಗಾಗಲೇ ಗಣತಿಗೆ ದಿನಾಂಕ ನಿಗದಿಪಡಿಸಿರುವುದರಿಂದ ಸಮಯ ವ್ಯರ್ಥ ಮಾಡದೇ ಶೀಘ್ರ ಪೂರ್ಣಗೊಳಿಸುವಂತೆ ತಿಳಿಸಿದರು.
ಸಮಸ್ಯೆ ಉಂಟಾದಲ್ಲಿ ಮೇಲ್ವಿಚಾರಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳುವುದರ ಮೂಲಕ ಜನಗಣತಿಯನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಬಿಇಒ ಮಹೇಶ್, ಪಪಂ ಮುಖ್ಯಾಧಿಕಾರಿ ರೇಖಾ, ಶಿಕ್ಷಣ ಸಂಯೋಜಕ ಚಿನ್ನಪ್ಪಯ್ಯ, ಶಿಕ್ಷಕರಾದ ವೆಂಕಟರಾಜು, ಸಂತೋಷ್ ಹಾಗೂ ಇನ್ನಿತರರು ಇದ್ದರು.