ಯಳಂದೂರು ತಾಲೂಕಿನ ಯರಿಯೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 948ರಲ್ಲಿ ಅಪಘಾತವಾಗಿರುವುದುನ್ನು ಪರಿಶೀಲಿಸಿಸುತ್ತೀರುವು ಪೊಲೀಸ್ ಅಧಿಕಾರಿ 
ಚಾಮರಾಜನಗರ

ಅಪಘಾತದಲ್ಲಿ ಸೈಕಲ್ ಸವಾರ ಸಾವು

ಯಳಂದೂರು : ತಾಲೂಕಿನ ಯರಿಯೂರು ಗ್ರಾಮದ ಬಳಿ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತರಾದ ಘಟನೆ ಶನಿವಾರ ಸಂಜೆ ನಡೆದಿದೆ.
ಯರಿಯೂರು ಗ್ರಾಮದ ಉಪ್ಪಾರ ಬಡಾವಣೆ ನಿವಾಸಿ ನಂಜಶೆಟ್ಟಿ ( 70) ಮೃತ. ಜಮೀನಿಗೆ ತೆರಳುವುದಾಗಿ ಮನೆಯಲ್ಲಿ ಹೇಳಿ ಸೈಕಲ್ ಏರಿ ಹೊರಟಿದ್ದ ನಂಜಶೆಟ್ಟಿ, ಸಂಜೆ ಮನೆಗೆ ಬರುವ ಸಮಯದಲ್ಲಿ ಅಪಘಾತಕ್ಕೆ ಒಳಗಾದರು. ಚಾಮರಾಜನಗರದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಇವರಿಗೆ ಡಿಕ್ಕಿ ಹೊಡೆದಾಗ ತಲೆ, ಕೈ,ಕಾಲುಗಳಿಗೆ ತೀವ್ರ ಪೆಟ್ಟಾಯಿತು.
ಗ್ರಾಮಸ್ಥರ ಸಹಕಾರದಿಂದ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದರು. ಗ್ರಾಮೀಣ ಪ್ರದೇಶ ಪರಿಮಿತಿಯಲ್ಲಿ ಅತಿ ವೇಗದಿಂದ ವಾಹನ ಚಾಲನೆ ಮಾಡಿ ಅಪಘಾತವೆಸಗಿದ ಚಾಲಕನ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ಸುಹ್ಮಬ್ರಣ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಾಲಕನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.