ಚಾಮರಾಜನಗರ

ಆಯತಪ್ಪಿ ಬಿದ್ದು ಬೈಕ್ ಸವಾರ ಮೃತ

ಲಲಾಟಾಕ್ಷ ಎಸ್
ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೆಟಿಯನ್ ಕ್ಯಾಂಪ್‌ಗೆ ತೆರಳುವ ಮಾರ್ಗದಲ್ಲಿ ಗುರುವಾರ ರಾತ್ರಿ ಆಯತಪ್ಪಿ ಬಿದ್ದು ಬೈಕ್ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.
ಚಾಮರಾಜನಗರ ತಾಲೂಕು ಪುಣಜನೂರು ಬಿಸಿಲಕೆರೆ ಪೋಡಿನ ರಾಜು (27) ಮೃತರು. ಅಜಯ್ ಗಾಯಗೊಂಡವ. ರಾಜು ಗೇರುಮಾಳಂನಲ್ಲಿ ನಡೆದ ಜಾತ್ರೆಗೆ ಆಗಮಿಸಿದ್ದು, ರಾತ್ರಿ ಸುಮಾರು 7.30ರ ವೇಳೆಯಲ್ಲಿ ಬೈಕ್‌ನಲ್ಲಿ ಸ್ನೇಹಿತ ಅಜಯ್ ಎಂಬಾತನನ್ನು ಕೂರಿಸಿಕೊಂಡು ಗ್ರಾಮಕ್ಕೆ ಹಿಂತಿರುಗುತ್ತಿದ್ದ. ಈ ವೇಳೆ ಗುಂಡಿಮಾಳಕ್ಕೆ ಸಂಪರ್ಕ ಕಲ್ಪಿಸುವ ಟಿಬೆಟಿಯನ್ ಕ್ಯಾಂಪ್ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಆಯತಪ್ಪಿ ಬಿದ್ದು ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಹಿಂಬದಿ ಸವಾರ ಅಜಯ್‌ಗೆ ಸಣ್ಣಪುಟ್ಟ ಗಾಯವಾಗಿದೆ.
ಈ ಸಂಬಂಧ ಮೃತನ ಸಹೋದರ ಮಾದೇವ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರ್ ನಡೆಸಿದರು. ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ನೀಡಲಾಯಿತು.