ಹನೂರು: ತಾಲೂಕಿನ ಹೊಗೇನಕಲ್ ಫಾಲ್ಸ್‌ನ ಕಾವೇರಿ ನದಿಯಲ್ಲಿ ಶನಿವಾರ ಈಜಲು ತೆರೆಳಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ನಂದೂಗೂಡು ಹೋಬಳಿಯ ಕುರಹಟ್ಟಿ ಗ್ರಾಮದ ಶಶಿಕುಮಾರ್ (36) ಮೃತರು.
ಕುರಹಟ್ಟಿ ಗ್ರಾಮದ ಸ್ನೇಹಿತರಾದ ದೇವರಾಜು, ಲೋಕೇಶ್, ಕಿರಣ್‌ಮೂರ್ತಿ ಹಾಗೂ ಮಧು ಅವರ ಜತೆಗೂಡಿ ಮಧ್ಯಾಹ್ನ ಹೊಗೇನಕಲ್ ಫಾಲ್ಸ್‌ಗೆ ತೆರಳಿದ್ದರು. ಈ ವೇಳೆ ಸಮೀಪದ ಮಾರಿಕೊಟ್ಟಯಂ ಬಳಿಯ ಕಾವೇರಿ ನದಿಯಲ್ಲಿ ಎಲ್ಲರ ಜತೆಗೂಡಿ ಈಜಲು ಕಾವೇರಿ ನದಿಗೆ ಇಳಿದಿದ್ದರು. ಈ ವೇಳೆ ನೀರಿನ ಸುಳಿಗೆ ಸಿಲುಕಿ ಕಣ್ಮರೆಯಾದರೆ, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮ.ಬೆಟ್ಟ ಪೊಲೀಸರು ಮಾಹಿತಿ ಪಡೆದು ಸ್ಥಳೀಯ ಈಜುಗಾರರ ಸಹಕಾರ ಪಡೆದು ನಾಪತ್ತೆಯಾದವನ ಪತ್ತೆಗೆ ಕಾರ್ಯಾಚರಣೆ ಕೊಂಡಿದ್ದರು. ಸಂಜೆ ಹೊತ್ತಿಗೆ ಮೃತದೇಹ ಪತ್ತೆಯಾಗಿದ್ದು, ಪೋಲಿಸರು ಮುಂದಿನ ಕ್ರಮಕೈಗೊಂಡಿದ್ದಾರೆ.