ಮಲೆಮಹದೇಶ್ವರ ಬೆಟ್ಟದ ಆನೆತಲೆ ದಿಂಬದ ಬಳಿ ಬುಧವಾರ ರಾತ್ರಿ ಕಾಣಿಸಿಕೊಂಡ ಒಂಟಿ ಸಲಗ.  
ಚಾಮರಾಜನಗರ

ತಾಳುಬೆಟ್ಟದ ಮಾರ್ಗದಲ್ಲಿ ಒಂಟಿ ಸಲಗ ಪ್ರತ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಮ.ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಭಕ್ತರಲ್ಲಿ ಆತಂಕ
ಹನೂರು: ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟ ಮಾರ್ಗದ ಆನೆತಲೆ ದಿಂಬದ ಬಳಿ ಇತ್ತೀಚೆಗೆ ರಾತ್ರಿ ಒಂಟಿ ಸಲಗವೊಂದು ಕಾಣಿಸಿಕೊಂಡು ಭಕ್ತರಲ್ಲಿ ಆತಂಕವನ್ನು ಉಂಟು ಮಾಡಿತು.
ಈ ಮಾರ್ಗದಲ್ಲಿ ಕಾಡಾನೆ ಹಾಗೂ ಚಿರತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಭಕ್ತರು ತೀವ್ರ ಆಕ್ಷೇಪ ಪಡಿಸಿದ್ದಾರೆ. ಕಳೆದ ತಿಂಗಳ ಹಿಂದೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಭಕ್ತರೊಬ್ಬರೂ ಚಿರತೆ ದಾಳಿಗೆ ಬಲಿಯಾಗಿದ್ದರು. ಮಹಾ ಶಿವರಾತ್ರಿ ಜಾತ್ರೆ ವೇಳೆ ಈ ಮಾರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಪಾಲಕರೊಂದಿಗೆ ಪಾದಯಾತ್ರೆಯಲ್ಲಿ ತೆರಳುತಿದ್ದ ಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇದರಿಂದ ಭಕ್ತರನ್ನು ಬೆಚ್ಚಿ ಬೀಳಿಸಿತ್ತು. ಆದರೆ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯುವಲ್ಲಿ ಹೆಚ್ಚಿನ ನಿಗಾ ವಹಿಸುತ್ತಿಲ್ಲ.
ಈಗಿರುವಾಗ ಬುಧವಾರ ರಾತ್ರಿ 8.20 ವೇಳೆಯಲ್ಲಿ ಆನೆತಲೆ ದಿಂಬದ ಬಳಿಯ ರಸ್ತೆ ಬದಿಯಲ್ಲೇ ಒಂಟಿ ಸಲಗ ಮತ್ತೇ ಕಾಣಿಸಿಕೊಂಡಿದೆ. ಇದರ ದೃಶ್ಯವನ್ನು ಕಾರಿನಲ್ಲಿ ತೆರಳುತ್ತಿದ್ದ ಭಕ್ತರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ.