ಕೆಳಗೊಬ್ಬೆ ದೊಡ್ಡಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಶೋಧ ಕಾರ್ಯ ನಡೆಸಿದರು.  
ಚಾಮರಾಜನಗರ

ಕೆಳಗೊಬ್ಬೆ ದೊಡ್ಡಿಯಲ್ಲಿ ನಾಯಿ ಎಳೆದೊಯ್ದ ಚಿರತೆ

ಹನೂರು: ತಾಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಜನೂರು ಸಮೀಪದ ಕೆಳಗೊಬ್ಬೆ ದೊಡ್ಡಿಯಲ್ಲಿ ಭಾನುವಾರ ರಾತ್ರಿ ನಾಯಿಯನ್ನು ಚಿರತೆ ಎಳೆದೊಯ್ದಿದೆ.
ದೊಡ್ಡಿಯ ಮಹದೇವ ಅವರ ಮನೆಯ ಮುಂಭಾಗ ಕಟ್ಟಿದ್ದ ನಾಯಿಯನ್ನು ರಾತ್ರಿ ಚಿರತೆ ಎಳೆದೊಯ್ದಿದೆ. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಇಲಾಖೆ ಸಿಬ್ಬಂದಿ ಪರಿಶೀಲಿಸಿ ಶೋಧ ಕಾರ್ಯ ಕೈಗೊಂಡರು. ಡ್ರೋನ್ ಕ್ಯಾಮರಾದಲ್ಲಿ ಸುಮಾರು 100 ಮೀಟರ್ ಅಂತರದಲ್ಲಿ ಚಿರತೆ ಕಾಣಿಸಿಕೊಂಡಿದೆ. ಶೋಧ ಕಾರ್ಯದಲ್ಲಿ ಭಾರತೀಯ ಕಿಸಾನ್ ಸಂಘದ ಕೊಪ್ಪ ಗ್ರಾಮ ಘಟಕದ ರೈತರು ಭಾಗಿಯಾಗಿದ್ದರು.