ಕೊಳ್ಳೇಗಾಲದ ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಚಾಲನೆ ನೀಡಿದರು. ಸುನೀತಾ, ಎಂ.ಕಾವ್ಯಶ್ರೀ, ಎಂ.ರಂಜಿತ್‌ಕುಮಾರ್, ಭಾಸ್ಕರ್, ಮಂಜುಳಾ ಇತರರು ಇದ್ದರು. 
ಚಾಮರಾಜನಗರ

ಆರೋಗ್ಯ ಸಮಾಜಕ್ಕೆ ಸಮೃದ್ಧ ಅರಣ್ಯ ಅಗತ್ಯ

ಕೊಳ್ಳೇಗಾಲ: ಪಟ್ಟಣದ ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನವನ್ನು ಆಯೋಜಿಸಲಾಗಿತ್ತು.
ವೇದಿಕೆ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಚಾಲನೆ ನೀಡಿದರು. ಬಳಿಕ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಸುನೀತಾ ಮಾತನಾಡಿ, ಪರಿಸರವನ್ನು ಉಳಿಸಿದರೆ ಮಾತ್ರ ನಮಗೆ ಜೀವಿಸಲು ಉತ್ತಮ ಪರಿಸರ ಸಿಗಲಿದೆ. ಆರೋಗ್ಯ ಸಮಾಜಕ್ಕೆ ಸಮೃದ್ಧ ಅರಣ್ಯ, ಗಿಡ, ಮರಗಳಿರುವ ಪರಿಸರ ಅತ್ಯಗತ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಕಾವ್ಯಶ್ರೀ, ಅಪರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಎಂ.ರಂಜಿತ್ ಕುಮಾರ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಬಿಇಒ ಮಂಜುಳಾ, ಹಿರಿಯ ವಕೀಲ ವೆಂಕಟಾಚಲ, ವಕೀಲರ ಸಂಘದ ಕಾರ್ಯದರ್ಶಿ ಡಿ.ಕೆಂಪಯ್ಯ, ಉಪಾಧ್ಯಕ್ಷೆ ಸೀಮಾ ತಹಸಿನ್ ಸುಲ್ತಾನ, ಪಿ.ಎಸ್.ಡಬ್ಲ್ಯೂ.ಸಿ.ಕೆ ಅಧ್ಯಕ್ಷ ಜಾನ್ ಪೀಟರ್, ಜೆ.ಪ್ರವೀಣ್, ಚಂದನ್, ದೇವಾನಂದ್, ಅರುಣ್‌ಕುಮಾರ್, ಬಫರ್ ಅರಣ್ಯ ವಲಯಾರಣ್ಯಧಿಕಾರಿ ಎಂ. ರವಿಕುಮಾರ್, ಸಾಮಾಜಿಕ ಅರಣ್ಯ ವಲಯಾಧಿಕಾರಿ ಎನ್.ಮೇಘನಾ ಇತರರು ಇದ್ದರು.