ಚಾಮರಾಜನಗರದ ಬ್ರೈಟ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 592 ಅಂಕ ಪಡೆದ ನೇತ್ರಾ, ಸಂಜನಾ ಮತ್ತು 587 ಅಂಕ ಪಡೆದ ಸಿಂಧುಶ್ರೀ, 586 ಅಂಕ ಪಡೆದ ಎಸ್.ಅಮೃತಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಪ್ರಾಂಶುಪಾಲ ಪ್ರಜ್ವಲ್, ಉಪನ್ಯಾಸಕರಾದ ರಂಗನಾಥ್, ಯೋಗೇಶ್, ಆಡಳಿತಾಧಿಕಾರಿ ಮೇನಕಾ ಇದ್ದರು.
- ಜಿಲ್ಲೆಗೆ ರಾಜ್ಯದಲ್ಲಿ 19ನೇ ಸ್ಥಾನ
- ವಿದ್ಯಾರ್ಥಿಗಳ ಸಾಧನೆ ಗಮನಾರ್ಹ
ಚಾಮರಾಜನಗರ: ದ್ವಿತೀಯ ಪಿಯುಸಿ ಪರೀಕ್ಷೆ-1ಯಲ್ಲಿ ಜಿಲ್ಲೆಗೆ ಶೇ.84.68ರಷ್ಟು ಲಿತಾಂಶ ಬಂದಿದ್ದು, ರಾಜ್ಯದಲ್ಲಿ ಜಿಲ್ಲೆ 19ನೇ ಸ್ಥಾನ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾಗಿದ್ದ 6239 ವಿದ್ಯಾರ್ಥಿಗಳಲ್ಲಿ 5283 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
2024ರಲ್ಲಿ ಶೇ.90.25, 2025ರಲ್ಲಿ ಶೇ.83.41 ಲಿತಾಂಶ ಬಂದಿತ್ತು. ಈ ಬಾರಿ ಉತ್ತಮ ಲಿತಾಂಶದ ನಿರೀಕ್ಷೆ ಹುಸಿಯಾಗಿದೆ. ಆದರೆ ವಿದ್ಯಾರ್ಥಿಗಳ ಸಾಧನೆ ಪ್ರಜ್ವಲಿಸುತ್ತಿದೆ. ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಯಾವ ವಿಭಾಗದಲ್ಲಿ ಯಾರು ಟಾಪರ್: ಕಲಾ ವಿಭಾಗದಲ್ಲಿ ಕೊಳ್ಳೇಗಾಲದ ಎಸ್.ವಿ.ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಂ.ಚೈತ್ರಾ 600ಕ್ಕೆ 586(ಶೇ.97.6) ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದಾಳೆ. ನಿಸರ್ಗ ಪದವಿ ಪೂರ್ವ ಕಾಲೇಜು ಅಫ್ರೀನ್ 583 (ಶೇ.97.31), ಹನೂರು ತಾಲೂಕಿನ ರಾಮಾಪುರ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಎಂ.ಗೌತಮಿ 582(ಶೇ.97) ಅಂಕ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನಗರದ ಬ್ರೈಟ್ ಪದವಿ ಪೂರ್ವ ಕಾಲೇಜಿನ ಬಿ.ಎಸ್.ಸಂಜನಾ
592 (ಶೇ.98.66), ಇದೇ ಕಾಲೇಜಿನ ನೇತ್ರಾ 592 (ಶೇ.98.66), ಕೊಳ್ಳೇಗಾಲದ ವಾಸವಿ ಕಾಲೇಜಿನ ಉಷಾ 590 (ಶೇ.98.33) ಅಂಕ ಗಳಿಸಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಕೊಳ್ಳೇಗಾಲದ ವಾಸವಿ ಪದವಿ ಪೂರ್ವ ಕಾಲೇಜಿನ ಐ.ಭೂಮಿಕಾ 587 (ಶೇ.98), ಇದೇ ಕಾಲೇಜಿನ ಎನ್.ಸಜಿನಿ 585 (ಶೇ.97.5) ನಿಸರ್ಗ ಪದವಿ ಪೂರ್ವ ಕಾಲೇಜಿನ ಮನುಶ್ರೀ 584 (ಶೇ.97.33) ಅಂಕ ಗಳಿಸಿದ್ದಾರೆ.
ಅಧಿಕ ಲಿತಾಂಶ ಪಡೆದ ಸರ್ಕಾರಿ ಕಾಲೇಜುಗಳು:
ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 91.30, ಹಂಗಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 89.29, ಹನೂರು ತಾಲೂಕಿನ ಲೊಕ್ಕನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.88.88ರಷ್ಟು ಲಿತಾಂಶ ಪಡೆದುಕೊಂಡಿವೆ.
ಹನೂರು ತಾಲೂಕಿನ ಮಾರ್ಟಳ್ಳಿಯ ಸೆಂಟ್ ಮೇರಿಸ್ ಪದವಿ ಪೂರ್ವ ಕಾಲೇಜು ಶೇ. 97.67,
ಕೊಳ್ಳೇಗಾಲದ ಲಯನ್ಸ್ ಪದವಿ ಪೂರ್ವ ಕಾಲೇಜು ಶೇ.95, ಕೊಳ್ಳೇಗಾಲದ ವಿಶ್ವಚೇತನ ಪದವಿ ಪೂರ್ವ ಕಾಲೇಜಿಗೆ ಶೇ.92.79ರಷ್ಟು ಲಿತಾಂಶ ಬಂದಿದೆ.
ಅನುದಾನ ರಹಿತ ಕಾಲೇಜುಗಳ ಶೇ.100ರ ಸಾಧನೆ
ಹನೂರು ತಾಲೂಕಿನ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು, ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜು, ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಶೇ.100ರಷ್ಟು ಲಿತಾಂಶ ಪಡೆದುಕೊಂಡಿವೆ. ಚಾಮರಾಜನಗರದ ಬ್ರೈಟ್ ಪದವಿ ಪೂರ್ವ ಕಾಲೇಜು ಶೇ.99.45, ಕೊಳ್ಳೇಗಾಲದ ವಾಸವಿ ಪದವಿ ಪೂರ್ವ ಕಾಲೇಜಿಗೆ ಶೇ.99ರಷ್ಟು ರಿಸಲ್ಟ್ ಬಂದಿದೆ.
ಸರ್ಕಾರಿ ಕಾಲೇಜಿನ ಕಲಾ ವಿಭಾಗದಲ್ಲಿ ಕೊಳ್ಳೇಗಾಲದ ಎಸ್.ವಿ.ಕೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಂ.ಚೈತ್ರಾ 586, ಎಂ.ರಮ್ಯಾ 577, ತಾಲೂಕಿನ ಕುದೇರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಮ್ಯಾ 575 ಅಂಕ ಪಡೆದಿದ್ದಾರೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಹನೂರು ರಾಮಾಪುರದ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಎಂ.ಗೌತಮಿ 582, ಗುಂಡ್ಲುಪೇಟೆ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಅಭಿಲಾಷ್ 573, ಚಾಮರಾಜನಗರದ ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಜೆ.ಸುಪ್ರಿತ 571 ಅಂಕ ತೆಗೆದುಕೊಂಡಿದ್ದಾರೆ. ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಕೊಳ್ಳೇಗಾಲದ ನಿಸರ್ಗ ಪದವಿ ಪೂರ್ವ ಕಾಲೇಜಿನ ಅಫ್ರೀನ್ 583, ಜೆ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ಅ್ರಬಾನು 579, ನಿಸರ್ಗ ಪದವಿ ಪೂರ್ವ ಕಾಲೇಜಿನ ಕೆ.ಸೋನ 578 ಅಂಕ ಪಡೆದಿದ್ದಾರೆ.