ಹನೂರಿನಲ್ಲಿ ಮಾದಾರ ಮಹಾಸಭಾ ತಾಲೂಕು ಘಟಕದ ಸದಸ್ಯತ್ವ ಅಭಿಯಾನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಚಾಲನೆ ನೀಡಿದರು. ಶಿವಮೂರ್ತಿ, ರಾಚಯ್ಯ, ಮಹಾದೇವ, ಸುದೇಶ್ ಇತರರು ಇದ್ದರು.  
ಚಾಮರಾಜನಗರ

ಶುಲ್ಕದ ಶೇ.75 ಹಣ ಮಕ್ಕಳ ಶಿಕ್ಷಣಕ್ಕೆ ಬಳಕೆ

ಪ್ರಮುಖ ಮುಖ್ಯಾಂಶಗಳು

  • ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹೇಳಿಕೆ
  • ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನ
ಹನೂರು: ರಾಜ್ಯ ಮಾದಾರ ಮಹಾಸಭಾ ತಾಲೂಕು ಘಟಕದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಗುರುವಾರ ಪಟ್ಟಣದ ಲೋಕೋಪಯೋಗಿ ಇಲಾಖೆ ಸಭಾಂಗಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಹಾಗೂ ಸಂಘಟನೆಗಾಗಿ ಮಹಾಸಭಾ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದೆ. ಆದ್ದರಿಂದ ತಾಲೂಕು ಮಹಾಸಭಾದಲ್ಲಿ ಪ್ರತಿಯೊಬ್ಬರೂ ಹೆಸರನ್ನು ನೋಂದಾಯಿಸಿಕೊಳ್ಳುವುದರ ಜತೆಗೆ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ನೋಂದಣಿ ಶುಲ್ಕದಲ್ಲಿ ಶೇ.75ರಷ್ಟು ಹಣವನ್ನು ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಅಭಿವೃದ್ಧಿಗಾಗಿ ವೆಚ್ಚ ಮಾಡಬೇಕು. ಮಹಾಸಭಾದ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಈಗಾಗಲೇ ಸಿಎಂ ಅವರಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮಹಾಸಭಾದ ಜಿಲ್ಲಾಧ್ಯಕ್ಷ ಶಿವಮೂರ್ತಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಚಯ್ಯ, ಡಾ. ಬಾಬು ಜಗಜೀವನರಾಮ್ ಸಂಘಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಮಹದೇವ, ಕಾರ್ಯದರ್ಶಿ ರವಿ, ಖಜಾಂಚಿ ಗೋವಿಂದ, ಗೌರವಾಧ್ಯಕ್ಷ ಶಿವಣ್ಣ, ಪಪಂ ಸದಸ್ಯ ಸುದೇಶ್, ಮುಖಂಡರಾದ ರಾಜು, ರಾಚಯ್ಯ, ಮಾದೇಶ್, ವೆಂಕಟಮಾದು, ರಘು, ಪ್ರವೀಣ್ ಇತರರು ಇದ್ದರು.