ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದ ಡಾ.ಭೀಮ್‌ರಾವ್ ರಾಮ್‌ಜಿ ಪ್ರೌಢಶಾಲೆಯ ಆವರಣದಲ್ಲಿ ಮೂರು ದಿನಗಳವರೆಗೆ ನಡೆದ ಬಾಲ್ ಬ್ಯಾಡ್ಮಿಂಟನ್ ತರಬೇತಿ ಮತ್ತು ರಾಜ್ಯ ತಂಡದ ಆಯ್ಕೆಯಲ್ಲಿ ಆಯ್ಕೆಯಾದ ಆಟಗಾರರು.
ಯಳಂದೂರು: ಚಾಮರಾಜನಗರ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕದ ಸಹಯೋಗದಲ್ಲಿ ಹೊನ್ನೂರಿನ ಡಾ.ಭೀಮ್‌ರಾವ್ ರಾಮ್‌ಜಿ ಪ್ರೌಢಶಾಲೆಯಲ್ಲಿ ಮೂರು ದಿನಗಳವರೆಗೆ ನಡೆದ ತರಬೇತಿ ಶಿಬಿರ ಹಾಗೂ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಬುಧವಾರ ಮುಕ್ತಾಯವಾಯಿತು.
ರಾಜ್ಯ ವಿವಿಧ ಜಿಲ್ಲೆಗಳಿಂದ ಬಂದಿದ್ದ 25 ಪ್ರತಿಭಾವಂತ ಬಾಲ್ ಬ್ಯಾಡ್ಮಿಂಟನ್ ಆಟಗಾರರು ಇದರಲ್ಲಿ ಭಾಗವಹಿಸಿದ್ದರು. ತಮಿಳು ನಾಡಿನ ಈರೋಡ್‌ನಲ್ಲಿ ನಡೆಯಲಿರುವ 2025-26ನೇ ಸಾಲಿನ 70ನೇ ರಾಷ್ಟ್ರೀಯ ಜೂನಿಯರ್ ಬಾಲಕರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ರಾಜ್ ತಂಡವನ್ನು ಇದೇ ವೇಳೆ ಪ್ರಕಟಿಸಲಾಯಿತು.
ರಾಜ್ಯವನ್ನು ಪ್ರತಿನಿಧಿಸುವ ಆಟಗಾರರಾಗಿ ಚರಣ್, ತಸ್ಲೀಮ್, ಲಿಖಿತ್, ಯತೀಶ್, ಆಕಾಶ್, ಪ್ರತಾಪ್, ಕಾರ್ತಿಕ್, ಧನುಷ್, ರಿತ್ವಿನ್ ಎನ್.ಸ್ವಾಮಿ, ಕಾರ್ತಿಕ್ ಆಯ್ಕೆಯಾದರು. ಮೀಸಲು ಆಟಗಾರರಾಗಿ ರಾಜು, ಕೋಮಲ್ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ತರಬೇತುದಾರರಾಗಿ ಬಿ.ಸುದರ್ಶಮ್ ವ್ಯವಸ್ಥಾಪಕರಾಗಿ ಕೌಶಿಕ್ ರಾಮ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ತಂಡದ ಅಸೋಸಿಯೇಷನ್ ಅಧ್ಯಕ್ಷರಾದ ನಾರಾಯಣಸ್ವಾಮಿ, ಖಜಾಂಚಿ ಮಹದೇವಯ್ಯ, ರಾಜು, ಮಲ್ಲೇಶ್, ವಿಮಲ್ ಹಾಗೂ ಪ್ರಮೋದ್‌ಚಂದ್ರನ್ ಸೇರಿದಂತೆ ಅನೇಕರು ಇದ್ದರು.