ಚಾಮರಾಜಗನರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದಿಂದ ಸೋಮವಾರ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು ಹೊಂಗನೂರು, ಸದಸ್ಯರ ಮತ್ತು ಅಧಿಕಾರಿಗಳು ಪಾಲ್ಗೊಮಡಿದ್ದರು.
- ಐಟಿ-ಜಿಎಸ್‌ಟಿ ಪಾವತಿದಾರರೆಂಬ ಕಾರಣಕ್ಕೆ ಸಿಗದ ಹಣ
- ದಾಖಲೆ ಪರಿಶೀಲನೆ ಬಳಿಕ ಅರ್ಹರೆಂದು ಗುರುತು
ಚಾಮರಾಜನಗರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಜಿಲ್ಲೆಯ 475 ಸೀಯರಿಂದ ಇನ್ನೂ ದೂರ ಉಳಿದಿದೆ.
2023ರ ಆಗಸ್ಟ್ 30ರಂದು ಗೃಹಲಕ್ಷ್ಮಿಯೋಜನೆ ಜಾರಿಯಾಯಿತು. ಇದರ ನಿಯಮಾವಳಿ ಪ್ರಕಾರ, ಐಟಿ ಮತ್ತು ಜಿಎಸ್‌ಟಿ ಪಾವತಿದಾರು ಗೃಹಲಕ್ಷ್ಮಿ ಯೋಜನೆ ಪಡೆಯಲು ಅನರ್ಹರು. ಯೋಜನೆ ಜಾರಿಯಾದ ತಿಂಗಳು ಅರ್ಜಿ ಸಲ್ಲಿಸಿದ್ದ ಎಲ್ಲ ಮಹಿಳೆಯರಿಗೂ ಹಣ ತಲುಪಿತ್ತು. ನಂತರ ಅರ್ಹ ಲಾನುಭವಿಗಳಿಗೆ ಮಾತ್ರ ಯೋಜನೆಯ ಹಣ ಕೈಸೇರಬೇಕೆಂಬ ಉದ್ದೇಶದಿಂದ ಲಾನುಭವಿಗಳ ಪಟ್ಟಿ ಪರಿಷ್ಕರಣೆ ನಡೆಯಿತು. ಈ ವೇಳೆ ಐಟಿ ಮತ್ತು ತೆರಿಗೆ ಪಾವತಿದಾರನ್ನು ಪತ್ತೆ ಮಾಡಿ ಯೋಜನೆಯ ಹಣವನ್ನು ಅಕೌಂಟ್‌ಗೆ ಹಾಕುವುದನ್ನು ನಿಲ್ಲಿಸಲಾಯಿತು.
ಈ ರೀತಿಯ ಪರಿಶೀಲನೆಯ ವೇಳೆ ಐಟಿ ಮತ್ತು ಜಿಎಸ್‌ಟಿ ತೆರಿಗೆ ಪಾವತಿದಾರಲ್ಲದ 475 ಮಹಿಳೆಯರು ಇದ್ದಾರೆ. ಐಟಿ ಮತ್ತು ಜಿಎಸ್‌ಟಿ ಎಂದರೇನು ಎಂದು ಗೊತ್ತಿಲ್ಲದೆ ಬ್ಯಾಂಕ್‌ನಲ್ಲಿ ಸಾಲ ಪಡೆಯುವ ಕಾರಣಕ್ಕೆ ನಡೆಸಿದ ಪ್ರಕ್ರಿಯೆಯಿಂದ ಅನೇಕರು ಐಟಿ, ಜಿಎಸ್‌ಟಿದಾರರ ಪಟ್ಟಿಗೆ ಸೇರಿದ್ದಾರೆ. ಇಂತಹವರಿಂದ ಗೃಹಲಕ್ಷ್ಮಿ ಯೋಜನೆ ದೂರ ಉಳಿದಿದ್ದು, ಅರ್ಹರಿಗೆ ಹಣ ತಲುಪುತ್ತಿಲ್ಲ. 2 ಸಾವರ ಮಹಿಳೆಯರು ಹೊರಕ್ಕೆ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 2026ರ ಏಪ್ರಿಲ್‌ವರೆಗೆ ಒಟ್ಟು 2,80860 ಮಹಿಳೆಯರು ಯೋಜನೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಚಾಮರಾಜನಗರ ತಾಲೂಕಿನಲ್ಲಿ 98052, ಗುಂಡ್ಲುಪೇಟೆ ತಾಲೂಕಿನಲ್ಲಿ 62595, ಹನೂರು ತಾಲೂಕಿನಲ್ಲಿ 49894, ಕೊಳ್ಳೇಗಾಲ ತಾಲೂಕಿನಲ್ಲಿ 47497, ಯಳಂದೂರು ತಾಲೂಕಿನಲ್ಲಿ 22822 ಲಾನುಭವಿಗಳಿದ್ದಾರೆ. ಯೋಜನೆಯ ಪ್ರಯೋಜನ ಪಡೆಯಲು ಐಟಿ ಮತ್ತು ಜಿಎಸ್‌ಟಿ ತೆರಿಗೆ ಪಾವತಿದಾರಾಗಿರಬಾರದು. ಈ ರೀತಿಯಲ್ಲಿ ಪತ್ತೆಯಾದ 2038 ಮಹಿಳೆಯರನ್ನು ಯೋಜನೆಯಿಂದ ಕೈಬಿಡಲಾಗಿದೆ. ಚಾಮರಾಜನಗರ ತಾಲೂಕಿನ 700, ಗುಂಡ್ಲುಪೇಟೆ ತಾಲೂಕಿನ 297, ಹನೂರು ತಾಲೂಕಿನ 987, ಕೊಳ್ಳೇಗಾಲ ತಾಲೂಕಿನ 491, ಯಳಂದೂರು ತಾಲೂಕಿನ 161 ಮಹಿಳೆಯರನ್ನು ಅನರ್ಹರು ಎಂದು ಗುರುತಿಸಲಾಗಿದೆ. ಒಟ್ಟು 2038 ಮಹಿಳೆಯರಲ್ಲಿ ಐಟಿ ಮತ್ತು ಜಿಎಸ್‌ಟಿ ತೆರಿಗೆದಾರರಲ್ಲದ 475 ಮಹಿಳೆಯರೂ ಸೇರಿದ್ದಾರೆ. ಇವರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಸುವ ಸಂಬಂಧ ಸೂಕ್ತ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ದಾಖಲೆಗಳನ್ನು ಪಡೆದುಕೊಂಡು ಕ್ರಮವಹಿಸಿದೆ. ರಾಜ್ಯಮಟ್ಟದಲ್ಲಿ ನಡೆಯುವ ಗ್ಯಾರಂಟಿ ಯೋಜನೆಯ ಸಭೆಯಲ್ಲಿ ಮಹಿಳೆಯರಿಗೆ ಹಣ ಕೊಡಿಸಲು ನಿರ್ಧರ ಮಾಡಲಾಗಿದೆ.
ಗೃಹಜ್ಯೋತಿ ಲಾನುಭವಿಗಳ ಪರಿಶೀಲನೆ:
ಪಂಚ ಗ್ಯಾರಂಟಿ ಯೋಜನೆಯ ಗೃಹಜ್ಯೋತಿ ಲಾನುಭವಿಗಳ ಪರಿಶೀಲನೆ ಜು.1ರಿಂದ ಆರಂಭವಾಗಿದೆ. ಜಿಲ್ಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಲಾನುಭವಿಗಳಿಂದ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 280142 ಗೃಹಜ್ಯೋತಿ ಯೋಜನೆಗೆ ಒಳಪಡುವ ಅರ್ಹ ಲಾನುಭವಿಗಳು ಇದ್ದಾರೆ. ಇವರಲ್ಲಿ 279912 ಲಾನುಭವಿಗಳು ನೊಂದಣಿ ಮಾಡಿಸಿಕೊಂಡಿದ್ದಾರೆ. 230 ಲಾನುಭವಿಗಳು ನೊಂದಣಿ ಮಾಡಿಸಲು ಬಾಕಿ ಉಳಿದಿದ್ದಾರೆ. ಯೋಜನೆಯನ್ನು ಬಳಸಿಕೊಳ್ಳುತ್ತಿರುವ ಲಾನುವಿಗಳ ಮನೆಗಳಲ್ಲಿ ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಸಾರ್ವಜನಿಕರಿಗೆ ದಾಖಲೆ ತೋರ್ಸೋ ಕೆಲ್ಸ:
ಒಂದೆಡೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ ನಡೆಯುತ್ತಿದೆ. ಮತ್ತೊಂದೆಡೆ ಗೃಹಜ್ಯೋತಿ ಯೋಜನೆಯ ಲಾನುಭವಿಗಳ ಮನೆಗಳ ಬಳಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದರ ನಡುವೆ ಸಾಮಾಜಿಕ ಭದ್ರತೆ ಪಿಂಚಣಿ ಯೋಜನೆಯ ಲಾನುಭವಿಗಳ ಸರ್ವೆ ನಡೆಸಿ ಸಂಶಯಾಸ್ಪದ ಪ್ರಕರಣಗಳಲ್ಲಿ ಪಿಂಚಣಿ ನಿಲ್ಲಿಸಲಾಗಿದೆ. ಪಿಂಚಣಿ ಬೇಕಾಗಿರುವವರು ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಿದೆ. ಹೀಗಾಗಿ ಪ್ರಸ್ತುತ ಸಾರ್ವಜನಿಕರಿಗೆ ದಾಖಲೆಗಳನ್ನು ತೋರಿಸುವುದೇ ಕೆಲಸವಾಗಿಬಿಟ್ಟಿದೆ.
ನಾಲ್ಕು ವರ್ಷದ ಹಿಂದೆ ನನ್ನ ಪತಿ ಲೋಕೇಶ್ ಅವರು ಪಿಎಂಇಜಿಪಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲು ಐಟಿ ಮಾಡಿಸಿದ್ದರು. ಬ್ಯಾಂಕ್‌ನಲ್ಲಿ 5 ಎಕರೆ ಜಮೀನು ಪತ್ರ ಅಡಮಾನ ಇಡಲು ತಿಳಿಸಲಾಗಿತ್ತು. ನಮ್ಮ ಬಳಿ ಜಮೀನು ಇಲ್ಲದ ಕಾರಣ ಸಾಲ ಸೌಲಭ್ಯ ಸಿಗಲಿಲ್ಲ. ನಂತರ ಐಟಿ ರದ್ದು ಮಾಡಿಸಿದ್ದೆವು. ಬಳಿಕ ಗೃಹಲಕ್ಷ್ಮಿ ಯೋಜನೆ ಪಡೆಯುವಾಗ ನಮ್ಮನ್ನು ಐಟಿ ಪಾವತಿದಾರರು ಎಂದು ಅನರ್ಹರ ಪಟ್ಟಿಗೆ ಸೇರಿಸಲಾಯಿತು. ಹಲವು ಬಾರಿ ಜಿಲ್ಲಾಡಳಿತ ಭವನಕ್ಕೆ ಹೋಗಿ ವಿಚಾರಿಸಿದರೂ ಪ್ರಯೋಜವಾಗಿಲ್ಲ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಖುದ್ದಾಗಿ ನಮ್ಮ ದಾಖಲೆಗಳನ್ನು ಪರಿಶೀಲಿಸಿಯೇ ಯೋಜನೆಯ ಹಣ ಕೊಡಲಿ. ಅರ್ಹತೆ ಇದ್ದರೂ ಯೋಜನೆಗೆ ಒಳಪಡಿಸಲು ಆಗುತ್ತಿಲ್ಲವೆಂದು ಬೇಸರವಾಗಿದೆ.
ಎಸ್.ನಿರ್ಮಲಾ ಲೋಕೇಶ್, ಬದನಗುಪ್ಪೆ ನಿವಾಸಿ, ಚಾಮರಾಜನಗರ
ಯೋಜನೆಯಿಂದ ಹೊರಗುಳಿದಿರುವ 475 ಮಹಿಳೆಯರ ದಾಖಲೆಗಳನ್ನು ಪರಿಶೀಲನೆ ಮಾಡಿ ಸೂಕ್ತ ಕ್ರಮ ವಹಿಸಲಾಗಿದೆ. ಬೆಂಗಳೂರಿನಲ್ಲಿ ಶನಿವಾರ ನಡೆಯಲಿರುವ ಗ್ಯಾರಂಟಿ ಯೋಜನೆಯ ಸಭೆಯಲ್ಲಿ ಈ ವಿಷಯವನ್ನು ಮುಂದಿಟ್ಟು ಮಹಿಳೆಯರನ್ನು ಯೋಜನೆಯ ಲಾನುಭವಿಗಳ ಪಟ್ಟಿಗೆ ಸೇರಿಸಲಾಗುವುದು.
ಎಚ್.ವಿ.ಚಂದ್ರು ಹೊಂಗನೂರು, ಜಿಲ್ಲಾಧ್ಯಕ್ಷ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಚಾಮರಾಜನಗರ