ಕೊಳ್ಳೇಗಾಲ ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆ ಯಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ವೈದ್ಯರು ದೃಷ್ಟಿ ಸಮಸ್ಯೆ ಇರುವವರನ್ನು ತಪಾಸಣೆ ಮಾಡಿದರು. ಎಚ್.ಕೆ ಮಹಾನಂದ, ಪ್ರವೀಣ್ ಕುಮಾರ್, ಹರ್ಷ ಇತರರು ಇದ್ದರು.  
ಚಾಮರಾಜನಗರ

34 ಜನರ ನೇತ್ರ ಶಸ್ತ್ರ ಚಿಕಿತ್ಸೆಗೆ ಶಿಫಾರಸು

ಪ್ರಮುಖ ಮುಖ್ಯಾಂಶಗಳು

  • ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆಗೆ ರವಾನೆ
  • ಕೊಳ್ಳೇಗಾಲದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ
ಕೊಳ್ಳೇಗಾಲ: ಪಟ್ಟಣದ ವಿಶ್ವಚೇತನ ಸಮೂಹ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್, ವಿಶ್ವ ಚೇತನ ಸಮೂಹ ವಿದ್ಯಾ ಸಂಸ್ಥೆಗಳು, ರೋಟರಿ ಮಿಡ್-ಟೌನ್ ಹಾಗೂ ಕೊಯಮತ್ತೂರು ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರಕ್ಕೆ ಬೆಂಗಳೂರು ಸಿಸಿಬಿ ವಿಭಾಗದ ಎಸಿಪಿ ಎಚ್.ಕೆ.ಮಹಾನಂದ ಚಾಲನೆ ನೀಡಿದರು. ಎಚ್.ಕೆ.ಟ್ರಸ್ಟ್ ಹಾಗೂ ಇತರ ಸಂಘ, ಸಂಸ್ಥೆಗಳೊಂದಿಗೆ ಸತತ 54 ತಿಂಗಳಿನಿಂದ ಪ್ರತಿ ಮಾಸದ ಎರಡನೇ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಇಲ್ಲಿಯವರವಿಗೂ 5921 ರೋಗಿಗಳು ಶಿಬಿರದಲ್ಲಿ ಪಾಲ್ಗೊಂಡು ಅವರಲ್ಲಿ 3513 ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಶಿಬಿರದಲ್ಲಿ 169 ಜನರು ತಪಾಸಣೆಗೆ ಒಳಪಟ್ಟರು. ಅವರಲ್ಲಿ 34 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳಿಸಲಾಯಿತು.
ಎಂಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ಪ್ರವೀಣ್ ಕುಮಾರ್, ನಗರಸಭಾ ಮಾಜಿ ಉಪಾಧ್ಯಕ್ಷ ಜಿ.ಹರ್ಷ, ಗಿರೀಶ್ ಜಡೆ, ಸತೀಶ್ ಬಾಬು, ಅರವಿಂದ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ.ಅಮೃತಾ, ಆಸ್ಪತ್ರೆ ಸಂಯೋಜಕ ವಿಜಯ್ ಕುಮಾರ್, ವಿಶ್ವಚೇತನ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ರವಿತೇಜ, ಶಾಂತರಾಜು, ಸಿದ್ಧಾರ್ಥ್ ಇದ್ದರು.