ಹನೂರಿನಲ್ಲಿ ಮಳೆ ಸುರಿದ ಹಿನ್ನೆಲೆ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ತೆರಳುವ ರಸ್ತೆಯಲ್ಲಿ ನೀರು ನಿಂತಿರುವುದು.
ಹನೂರು: ಪಟ್ಟಣದಲ್ಲಿ ಸೋಮವಾರ ಸಂಜೆ ಸುಮಾರು 15 ನಿಮಿಷಗಳ ಕಾಲ ಜೋರು ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪು ಅನುಭವ ನೀಡಿತು.
ಪಟ್ಟಣದಲ್ಲಿ ಬಿಸಿಲಿನ ಬೇಗೆ ಎಂದಿನಂತೆ ಇದ್ದು, ಸಂಜೆ 4.30ರಲ್ಲಿ ಮೋಡ ಕವಿದ ವಾತವರಣವಿತ್ತು. ಆರಂಭವಾದ ಜೋರು ಮಳೆ ಸುಮಾರು 15 ನಿಮಿಷಗಳ ಕಾಲ ಸುರಿಯಿತು. ತಗ್ಗು ಪ್ರದೇಶದಿಂದ ಕೂಡಿದ ರಸ್ತೆಗಳಲ್ಲಿ ಕೆಲಕಾಲ ನೀರು ಹರಿಯುವಂತಾಯಿತು. ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನಿಂದ ಕೂಡಿರುವ ರಸ್ತೆಯ ಗುಂಡಿಯಲ್ಲಿ ನೀರು ನಿಲ್ಲುವಂತಾಯಿತು. ಇನ್ನು ಬಂಡಳ್ಳಿ ಭಾಗದಲ್ಲೂ ಸುಮಾರು 10 ನಿಮಿಷಗಳ ಕಾಲ ಸಾಧಾರಣಾ ಮಳೆಯಾಗಿದ್ದು, ರೈತರಲ್ಲಿ ಸಂತಸವನ್ನು ಮೂಡಿಸಿತು.