ಹನೂರಿನಲ್ಲಿ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಗೃಹ ಬಳಕೆ ಸಿಲಿಂಡರನ್ನು ವಶಕ್ಕೆ ಪಡೆಯಿತು. ವಿಷ್ಣುಮೂರ್ತಿ, ಶಿವರಾಜ್, ಸೋಮಣ್ಣ ಇದ್ದರು.
ಹನೂರು: ಪಟ್ಟಣದ ಟೀ ಅಂಗಡಿ, ಹೋಟೆಲ್, ಬೇಕರಿ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ ಮೇಲೆ ಬುಧವಾರ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿ 11 ಗೃಹ ಬಳಕೆಯ ಸಿಲಿಂಡರ್ ವಶಕ್ಕೆ ಪಡೆಯಿತು.
ಪಟ್ಟಣದ ಟೀ ಅಂಗಡಿ, ಹೋಟೆಲ್, ಬೇಕರಿ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲಿ ಗೃಹ ಬಳಕೆಯ ಸಿಲಿಂಡರನ್ನು ಬಳಕೆ ಮಾಡುತ್ತಿರುವುದರ ಬಗ್ಗೆ ದೂರು ಬಂದಿತ್ತು.
ಈ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ವಸುಂಧರಾ ಅವರ ಸೂಚನೆ ಮೇರೆಗೆ ತಾಲೂಕು ಆಹಾರ ನಿರೀಕ್ಷಕ ವಿಷ್ಣುಮೂರ್ತಿ, ಸಿಬ್ಬಂದಿ ಸೋಮಣ್ಣ ಹಾಗೂ ಎಎಸ್‌ಐ ಶಿವರಾಜು ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲಿಸಿತು.
ಈ ವೇಳೆ ಅಶ್ವಿನಿ ಬೇಕರಿಯಲ್ಲಿ 3, ಶಾಂತಿ ಬೇಕರಿ, ಶ್ರೀ ಸಾಯಿ ರೆಸ್ಟೋರೆಂಟ್, ಬಸವೇಶ್ವರ ಟೀ ಸ್ಟಾಲ್, ಟೈಮ್ ಪಾರ್ಟಿ ಟೀ ಸ್ಟಾಲ್, ಶ್ರೀ ಮಹದೇಶ್ವರ ಹೋಟೆಲ್, ಹರ್ಷ ಆರಾಧ್ಯ ಟೀ ಸ್ಟಾಲ್, ರಾಜಮಣಿ ಟೀ ಸ್ಟಾಲ್ ಹಾಗೂ ಸರ್ಕಾರಿ ಆಸ್ಪತ್ರೆಯ ನಂದಿನಿ ಹಾಲಿನ ಕೇಂದ್ರದಲ್ಲಿ ತಲಾ ಒಂದು ಗೃಹ ಬಳಕೆಯ ಸಿಲಿಂಡರನ್ನು ವಶಕ್ಕೆ ಪಡೆದು ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿಗೆ ಹಸ್ತಾಂತರಿಸಲಾಯಿತು.
ಈ ಸಂಬಂಧ ಪ್ರಕರಣವನ್ನು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.